fbpx
ಸಮಾಚಾರ

ತಂದೆ ಆಗ್ತಿದ್ದಾರೆ ಕೃಷ್ಣಪ್ಪ ಗೌತಮ್: ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲ್ ರೌಂಡರ್

ಕರ್ನಾಟಕ ಮೂಲದ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಕೆ.ಗೌತಮ್ ಅವರು ತಂದೆಯಾಗುತ್ತಿದ್ದು ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

 

 

ಈ ವಿಚಾರವನ್ನು ಸ್ವತಃ ಕೆ. ಗೌತಮ್ ಅವರೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ದಂಪತಿಗಳು ಸುಂದರವಾದ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ. ಗೌತಮ್ ಮತ್ತು ಅವರ ಪತ್ನಿ ಇಬ್ಬರೂ ಕಪ್ಪು ಬಣ್ಣದ ಉಡುಪುಗಳಲ್ಲಿ ಕಾಣಿಸಿಕೊಂದ್ದಾರೆ. ಹಾಗೆಯೆ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯಲ್ಲಿಯೂ ಮಿಂಚಿದ್ದಾರೆ.

” ನಾವು ಪುಟ್ಟ ಅದ್ಭುತವನ್ನು ನಿರೀಕ್ಷೆಸುತ್ತಿದ್ದೇವೆ! ನಮ್ಮ ಹೃದಯಗಳು ಕೃತಜ್ಞತೆ ಮತ್ತು ಸಂತೋಷದಿಂದ ತುಂಬಿವೆ, ಜನವರಿ 2022 ರಲ್ಲಿ ನಮ್ಮ ಪುಟ್ಟ ಅದ್ಭುತದ ಆಗಮನಕ್ಕಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ” ಎಂದು ಗೌತಮ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top