fbpx
ಸಮಾಚಾರ

ಬಹುಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ವಿದ್ಯುಲೇಖಾ!

ಕಾಲಿವುಡ್​, ಟಾಲಿವುಡ್​ ಸೇರಿದಂತೆ ಕನ್ನಡದಲ್ಲೂ ನಟಿಸಿರುವ ಹಾಸ್ಯ ನಟಿ ವಿದ್ಯುಲ್ಲೇಖಾ ರಾಮನ್ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಾರಂಭದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದು, ಪ್ರೀ ವೆಡ್ಡಿಂಗ್ ಫೋಟೋಗಳು ವೈರಲ್ ಆಗುತ್ತಿವೆ. ತನ್ನ ಗೆಳೆಯ ಸಂಜಯ್ ಅವರನ್ನು ಪ್ರೇಮವಿವಾಹವಾಗಿದ್ದಾರೆ. ನಟಿಯ ವಿವಾಹದ ವಿಚಾರ ತಿಳಿದಂತೆ ನಟ-ನಟಿಯರಯ ಸೇರಿ ಅನೇಕ ಅಭಿಮಾನಿಗಳು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ವಿದ್ಯುಲೇಖಾ ಸಹೋದರಿ ಗೀತಾಂಜಲಿ ಸೋಷಿಯಲ್ ಮೀಡಿಯಾದಲ್ಲಿ ಸಹೋದರಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಸಂಜಯ್‌ ಭೇಟಿಯಾದ ಕ್ಷಣದ ಬಗ್ಗೆ ವಿದ್ಯುಲೇಖಾ ಹೇಳಿದ್ದಾರೆ. ‘ನನಗೆ ಡೇಟಿಂಗ್ ಆ್ಯಪ್‌ ಅಂದ್ರೆ ಇಷ್ಟ ಇಲ್ಲ. ಅದಕ್ಕೂ ಹೆಚ್ಚಾಗಿ ಆ ಆ್ಯಪ್‌ಗಳಲ್ಲಿ ಫೋಟೋ ಹಾಕುವುದು ಎಂದೆ ನನಗೆ ಆಗಲ್ಲ. ನನ್ನ ಸ್ನೇಹಿತೆ ಒತ್ತಾಯ ಮಾಡಿದ್ದಕ್ಕೆ ನಾನೂ ಸೇರಿಕೊಂಡೆ. ಅಲ್ಲಿ ನಾನು ಸಂಜಯ್ ಅವರನ್ನು ಭೇಟಿ ಮಾಡಿದೆ. ಅವರ ಪ್ರೊಫೈಲ್‌ನ ರೈಟ್‌ ಸ್ವೈಪ್ ಮಾಡಿದ್ದೀನಿ. ಅವರೊಂದಿಗೆ ಮಾತನಾಡಲು ಶುರು ಮಾಡಿದ ನಂತರ ಅವರು ನನಗೆ ಹಲವು ವರ್ಷಗಳಿಂದ ಪರಿಚಯವಿದೆ ಅನಿಸುತ್ತಿತ್ತು,’ ಎಂದು ಹೇಳಿದ್ದಾರೆ.

ವಿದ್ಯುಲ್ಲೇಖಾ 2012ರಲ್ಲಿ ಗೌತಮ್ ಮೆನನ್ ಜೊತೆ ‘Neethaane En Ponvasantham’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟರು. ಎಂಟು ವರ್ಷದ ಸಿನಿಮಾ ಜರ್ನಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top