fbpx
ಸಮಾಚಾರ

ವಿಚ್ಛೇದನದ ವದಂತಿ ಬೆನ್ನಲ್ಲೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ನಟಿ ಸಮಂತಾ

ನಾಗ ಚೈತನ್ಯ ಜತೆ ನಟಿ ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ, ಅವರ ಸಂಬಂಧ ಶೀಘ್ರವೇ ಮುರಿದು ಬೀಳಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಇದಕ್ಕೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸಮಂತಾ ಅವರಂತೂ ಆ ಬಗ್ಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಇನ್ನು, ಅಕ್ಕಿನೇನಿ ಕುಟುಂಬ ಮಾಧ್ಯಮದ ಎದುರು ಬರುತ್ತಿಲ್ಲ. ಈ ವದಂತಿಗಳ ಮಧ್ಯೆಯೇ ಸಮಂತಾ ಮನೆಗೆ ಹೊಸ ಟಿಟಿಯನ್ನು ಸ್ವಾಗತಿಸಿದ್ದಾರೆ.

 

 

ಸಮಂತಾ ತನ್ನ ಹೊಸ ಕುಟುಂಬದ ಸದಸ್ಯೆಯ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ, ಸಾಶಾ ಎಂಬ ಸಣ್ಣ ಮುದ್ದು ಪ್ರಾಣಿಯು, ಹ್ಯಾಶ್ ತಂಗಿ ಎಂದು ಬರೆದಿದ್ದಾರೆ. ಹೊಸ ನಾಯಿ ಮರಿಯನ್ನು ಕಾಳಜಿಯಿಂದ ನೋಡಿಕೊಳ್ಳುವ ಸಲುವಾಗಿ ಈ ದಿನಗಳಲ್ಲಿ ಕಾಫಿ ಕುಡಿಯಲು ಅಥವಾ ಶಾಂತವಾಗಿ ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಒಂದು ಕೈಯಿಂದ ಸಾಶಾ ಮತ್ತು ಇನ್ನೊಂದು ಕೈಯಿಂದ ಹ್ಯಾಶ್‌ನನ್ನು ಹಿಡಿದು ಮುದ್ದಿಸುತ್ತಿರುವುದನ್ನು ಕಾಣಬಹುದು.

‘‘ಇಂದು ಮುಂಜಾನೆಯಿಂದ ಇದುವರೆಗೆ 19 ಬಾರಿ ಸಾಷಾ ವಿಸರ್ಜಿಸಿದ ಮೂತ್ರವನ್ನು ಸ್ವಚ್ಛಮಾಡಿದ್ದೇನೆ. ಇನ್ನೂ ಸಮಯ 9 ಗಂಟೆಯಷ್ಟೇ! ಎಲ್ಲಾ ಪೂರೈಸಿ ಒಂದೈದು ನಿಮಿಷ ಈಗ ಕಾಫಿ ಕುಡಿಯಲು ಕುಳಿತಿದ್ದೇನೆ, 5 ನಿಮಿಷಗಳ ಬಿಡುವು ದೊರೆತದ್ದಕ್ಕೆ ಆಹಾ ಎನಿಸುತ್ತಿದೆ. ಮನೆಯಲ್ಲಿ ಪುಟಾಣಿ ದೈತ್ಯೆಯೊಬ್ಬಳು ಓಡಾಡುತ್ತಿದ್ದಾಳೆ, ‘ಸಾಷಾ’ಳಿಗೆ ಹಾಯ್ ಹೇಳಿ’’ ಎಂದು ಅವರು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top