fbpx
ಸಮಾಚಾರ

ಪಂಜಾಬ್ ಅಂಗಳದಲ್ಲಿ ಕನ್ನಡದ ಕಂಪು: ವಿಷ್ಣುದಾದ ಹಾಡು ಹಾಡಿದ ಅನಿಲ್ ಕುಂಬ್ಳೆಗೆ ಅಭಿಮಾನಿಗಳು ಫಿದಾ

ಐಪಿಎಲ್ 2021ರ ಟೂರ್ನಿಯ ಎರಡನೇ ಭಾಗ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ. ಈಗಾಗಲೇ 8 ತಂಡಗಳು ದುಬೈನಲ್ಲಿ ಬೀಡುಬಿಟ್ಟಿದೆ. ಕ್ವಾರಂಟೈನ್ ಸೇರಿದಂತೆ ಹಲವು ನಿರ್ಬಂಧಗಳಿಂದ ಆಟಗಾರರನ್ನು ಹುರಿದುಂಬಿಸಲು ಆಯಾ ತಂಡಗಳು ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ. ಹೀಗೆ ಪಂಜಾಬ್ ಕಿಂಗ್ಸ್ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಕೋಚ್ ಅನಿಲ್ ಕುಂಬ್ಳೆ ಕನ್ನಡ ಸಿನಿಮಾದ ಜನಪ್ರಿಯ ಹಾಡು ಹಾಡುವ ಮೂಲಕ ಎಲ್ಲರ ಕನ್ನಡಿಗರ ಮನಗೆದ್ದಿದ್ದಾರೆ.

 

 

ಹೌದು, ಯುಎಇನಲ್ಲಿ ಐಪಿಎಲ್​ನ ದ್ವಿತಿಯಾರ್ಧಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಪಂಜಾಬ್ ಕಿಂಗ್ಸ್​​ ತಂಡವು ಇಳಿ ಸಂಜೆಯಲ್ಲಿ ಮನರಂಜನೆಯ ಮೊರೆ ಹೋಗುತ್ತಿದ್ದಾರೆ. ಈ ಮೋಜು ಮಸ್ತಿ ಸಮಯದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಸೃಷ್ಟಿಸಿದ್ದಾರೆ ಪಂಜಾಬ್ ಕಿಂಗ್ಸ್​. ಈ ಕಾರ್ಯಕ್ರಮದಲ್ಲಿ ತಂಡದ ಕೋಚ್ ಅನಿಲ್ ಕುಂಬ್ಳೆ, ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಸೇರಿದಂತೆ ಅನೇಕರು ತಮ್ಮ ಹಾಡುಗಾರಿಕೆ ಮೂಲಕ ಆಟಗಾರರಿಗೆ ಮನರಂಜನೆ ಒದಗಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡ ಹಾಡನ್ನೂ ಸಹ ಹಾಡುವ ಮೂಲಕ ಕೇಳುಗರ ಮನಕ್ಕೆ ಮುದ ನೀಡಿದರು. ಅದರಲ್ಲೂ ಕರ್ನಾಟಕದ ಅಭಿಮಾನಿಗಳ ಹೃದಯ ಗೆದ್ದರು. ಹೌದು, 1974 ರಲ್ಲಿ ಬಿಡುಗಡೆಯಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್, ಭಾರತಿ ಅಭಿನಯದ ದೇವರಗುಡಿ ಚಿತ್ರದ ಮಾಮರವೆಲ್ಲೋ…ಕೋಗಿಲೆಯೆಲ್ಲೋ ಗೀತೆಯನ್ನು ಹಾಡುವ ಮೂಲಕ ಕುಂಬ್ಳೆ ಪಂಜಾಬ್ ಹುಡುಗರನ್ನು ರಂಜಿಸಿದರು.

ಇನ್ನು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಪಂದ್ಯವೊಂದು ಮುಗಿದ ನಂತರ ಸುದ್ದಿಗೋಷ್ಠಿಯೊಂದರಲ್ಲಿ ಪಾಲ್ಗೊಂಡಿದ್ದ ಅನಿಲ್ ಕುಂಬ್ಳೆ ಪತ್ರಕರ್ತರು ಇಂಗ್ಲಿಷ್ ಭಾಷೆಯಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಕೂಡ ಕನ್ನಡದಲ್ಲಿಯೇ ಉತ್ತರಿಸುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top