fbpx
ಸಮಾಚಾರ

ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲೀಕ್!!!ಟೈಟಲ್ ಏನು ಗೊತ್ತಾ?

ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ ಎಂದು ಕರೆಸಿಕೊಳ್ಳುವ ನಟ, ನಿರ್ದೇಶಕ ಮತ್ತು ನಿರ್ಮಾಪಕ ಉಪೇಂದ್ರ ಯಾವಾಗ ಮತ್ತೆ ನಿರ್ದೇಶನ ಮಾಡುತ್ತಾರೆ ಅನ್ನೋ ಪ್ರಶ್ನೆ ಗಾಂಧಿನಗರದಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಕಥೆಗಳನ್ನು ಮಾಡಿದ್ದೇನೆ. ಎಲ್ಲರಿಗೂ ಈ ಕಥೆಗಳು ಥ್ರಿಲ್ ಕೊಡುತ್ತವೆ. ಸದ್ಯದಲೇ ನನ್ನ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್​​ ಮಾಡುತ್ತೇನೆ ಎಂದು ಈ ಹಿಂದೆ ಉಪೇಂದ್ರ ಹೇಳಿಕೊಂಡಿದ್ದರು.

ವಿಭಿನ್ನ ಮತ್ತು ವಿಶೇಷ ರೀತಿಯ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಉಪೇಂದ್ರ ನಿರ್ದೇಶನ ಮಾಡಿ ಬಹುದಿನಗಳೇ ಆಯಿತು. ಅವರ ಲಕ್ಷಾಂತರ ಅಭಿಮಾನಿಗಳು ಉಪೇಂದ್ರ ಮತ್ತೆ ಯಾವಾಗ ನಿರ್ದೇಶಕರ ಕ್ಯಾಪ್ ತೊಡುತ್ತಾರೆ ಅಂತಾ ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅನೇಕ ಸ್ಮರಣೀಯ ಮತ್ತು ವಿಭಿನ್ನ ಚಿತ್ರಗಳನ್ನು ನೀಡಿದ್ದಾರೆ. ಅವರ ಮುಂದಿನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದೀಗ ಸ್ಯಾಂಡಲ್​ವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಬಂದಿದೆ. ಉಪೇಂದ್ರ ನಿರ್ದೇಶನದ ಚಿತ್ರ ಅವರ ಜನ್ಮದಿನವಾದ ಸೆಪ್ಟೆಂಬರ್ 18ಕ್ಕೆ ಘೋಷಣೆಯಾಗಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಚಿತ್ರ ‘ಯು & ಐ’ (U and I)ನ ಪೋಸ್ಟರ್ ಕೂಡ ಲೀಕ್ ಆಗಿದೆ ಎನ್ನಲಾಗಿದ್ದು, ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೇಲ್ನೋಟಕ್ಕೆ ನಾಮದ ಚಿಹ್ನೆಯಂತೆ ಕಾಣುವ ಈ ಟೈಟಲ್, ಆಂಗ್ಲ ಭಾಷೆಯ ‘ಯು’ ಮತ್ತು ‘ಐ’ಯನ್ನು ಒಳಗೊಂಡಿದೆ. ಇದರೊಂದಿಗೆ ಉಪೇಂದ್ರರ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ‘ನೀನು’, ‘ನಾನು’ ಇಲ್ಲಿಯೂ ಮುಂದುವರೆಯಲಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ.

ಹೌದು, ಉಪೇಂದ್ರ ನಿರ್ದೇಶಿಸುತ್ತಿರುವ ಹೆಸರಿಲ್ಲ ಬದಲಿಗೆ ಸಿಂಬಲ್ ಅಷ್ಟೇ ಇದೆ. ನಾಮ (ಎರಡು ಬಿಳಿ ಒಂದು ಕೆಂಪು) ಚಿತ್ರವಷ್ಟೆ ಪೋಸ್ಟರ್‌ ಮೇಲಿದೆ. ಈ ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಯನ್ನು ಉಪೇಂದ್ರ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್‌ನಲ್ಲಿ ಹೆಸರಿನ ಬದಲಿಗೆ ತಿರುಪತಿ ನಾಮವಷ್ಟೆ ಕಾಣುತ್ತಿದೆ. ಆದರೆ ಆ ನಾಮವು ಇಂಗ್ಲೀಷ್‌ನ ಯು (U) ಎಂದು ಅರ್ಥೈಸಿಕೊಳ್ಳಬಹುದು. ಮಧ್ಯದಲ್ಲಿ ಕೆಂಪು ಬಣ್ಣದ ನಾಮವನ್ನು ಇಂಗ್ಲೀಷ್‌ನ ಐ (I) ಎಂದು ಅರ್ಥೈಸಿಕೊಳ್ಳಬಹುದು. ಸಿನಿಮಾದ ಪೋಸ್ಟರ್‌ ಅನ್ನು ಉಪೇಂದ್ರ ಅವರೇ ಡೀಕೋಡ್ ಮಾಡಿ ಹೇಳಬೇಕಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top