ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಠಕ್ಕರ್ ಕೊಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ನಾನು ಸುಮ್ಮನೆ ಆರು ಸಾರಿ ಸಂಸದನಾಗಿ ಆಯ್ಕೆಯಾಗಲಿಲ್ಲ. ಅದರಲ್ಲಿಯೂ ಮೂರು ಸಾರಿ ಲೋಕಸಭೆಯಿಂದ ಆರಿಸಿ ಬಂದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ ನಾನು ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ ಎಂದಿದ್ದಾರೆ.
‘ಬೊಮ್ಮಾಯಿ ಅವರಂತಹ ಸಣ್ಣವರಿಗೆ ಪ್ರತಿಕ್ರಿಯಿಸಲು ನೀವು ತುಂಬ ದೊಡ್ಡವರು’ ಎಂಬ ಕಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ಬಹುಷಃ ಇರಬಹುದು. ಆದರೆ ಅವರ ತಂದೆ ನನಗೆ ಆತ್ಮೀಯ ಸ್ನೇಹಿತ. ಬೊಮ್ಮಾಯಿ ನನಗೆ ಚಿಕ್ಕ ಹುಡುಗನಾಗಿ ಗೊತ್ತು. ಹಾಗಾಗಿ ನಾನು ಅವನಿಗೆ ಈಗಲೂ ಬಯ್ಯಬಹುದು’ ಎಂದಿದ್ದಾರೆ.
ಏನಿದು ವಿಚಾರ:
ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಲವು ತಿಂಗಳುಗಳ ಹಿಂದೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಕುರಿತು ಸುಬ್ರಮಣಿಯನ್ ಸ್ವಾಮಿ ಮಾಡಿದ್ದ ಟ್ವೀಟ್ ಉಲ್ಲೇಖಿಸಿದಾಗ ಬಸವರಾಜ ಬೊಮ್ಮಾಯಿ ಅವರು ಸ್ವಾಮಿ ಅವರನ್ನು ಫ್ರೀಲ್ಯಾನ್ಸ್ ಪೊಲಿಟಿಷಿಯನ್ ಎಂದಿದ್ದರು. ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದೂ ಶ್ಲಾಘಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
