fbpx
ಸಮಾಚಾರ

“ನಟ ಸೋನು ಸೂದ್ ರಿಂದ 20 ಕೋಟಿ ರೂ. ತೆರಿಗೆ ವಂಚನೆ” ಆದಾಯ ತೆರಿಗೆ ಇಲಾಖೆ ಬಿಚ್ಚಿಟ್ಟ ಸ್ಪೋಟಕ ಮಾಹಿತಿ

ನಟ ಸೋನು ಸೂದ್ ಅವರು 20 ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಇಂದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಐಟಿ ಇಲಾಖೆಯ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸೂದ್ ಅವರ ಮುಂಬೈ ನಿವಾಸಕ್ಕೆ ಶೋಧಕ್ಕಾಗಿ ಭೇಟಿ ನೀಡಿದ ಬಳಿಕ ಈ ಹೇಳಿಕೆ ನೀಡಿದೆ ಎಂದು NDTV ವರದಿ ಮಾಡಿದೆ.

ಮುಂಬೈಯಲ್ಲಿ ನಟ ಸೋನು ಸೂದ್ ಗೆ ಸೇರಿದ ಹಲವು ಸ್ಥಳಗಳು ಮತ್ತು ಲಕ್ನೊ ಮೂಲದ ಮೂಲಭೂತ ಸೌಕರ್ಯಗಳಲ್ಲಿ ತೊಡಗಿರುವ ಹಲವು ಕೈಗಾರಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ.

ಇದುವರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನಟ ಮತ್ತು ಅವರ ಸಹಚರರು ಸುಮಾರು 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಇಲಾಖೆ ಹೇಳಿದೆ.

ಇಲಾಖೆಯು ಮುಂಬೈನ ಸೂದ್‌ ಅವರ ವಿವಿಧ ಸ್ಥಳದಲ್ಲಿ ಕಾರ್ಯಾಚರಣೆಯನ್ನು ನಡೆಸಿತ್ತು. ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮಗಳಲ್ಲಿ ಒಟ್ಟು 28 ನಿವೇಶನಗಳನ್ನು ಎರಡು ದಿನಗಳಲ್ಲಿ ಶೋಧಿಸಲಾಯಿತು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿಕೆಯಲ್ಲಿ ನಟ ಮತ್ತು ಆತನ ಸಹಚರರ ಆವರಣದಲ್ಲಿ ಶೋಧದ ಸಮಯದಲ್ಲಿ, ತೆರಿಗೆ ವಂಚನೆಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳು ಸಿಕ್ಕಿವೆ” ಎಂದು ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top