fbpx
ಸಮಾಚಾರ

IPL2021 ಪ್ಲೇ-ಆಫ್‌ ಲೆಕ್ಕಾಚಾರ: ಆರ್​ಸಿಬಿ ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?: ಇಲ್ಲಿದೆ ಮಾಹಿತಿ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಯುಎಇ ಚರಣದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್‌ ಭಾಗ 2 ಆರಂಭವಾಗಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್‌ಗೇರಲು ಸಕಲ ರಣತಂತ್ರಗಳನ್ನು ರೂಪಿಸಿದೆ.

ಈಗಿನ ಪಾಯಿಂಟ್ ಟೇಬಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 12 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್​ಸಿಬಿ ತಂಡ ಕೂಡ 10 ಪಾಯಿಂಟ್​ನೊಂದಿಗೆ 3ನೇ ಸ್ಥಾನ ಅಲಂಕರಿಸಿದೆ. ಮುಂಬೈ ಇಂಡಿಯನ್ಸ್ 8 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ.

RCB ಗೆ ಬೇಕು 3 ಗೆಲುವು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ 7 ಪಂದ್ಯಗಳು ಬಾಕಿ ಇದೆ. ಇದರಲ್ಲಿ ಮೂರು ಪಂದ್ಯವನ್ನು ಗೆದ್ದರೆ ಸುಲಭವಾಗಿ ಪ್ಲೇ ಆಫ್ ಟಿಕೆಟ್ ದೊರೆಯುತ್ತದೆ. ಹೀಗಾಗಿ ಕೊಹ್ಲಿ ಪಡೆ ಈ ಬಾರಿಯೂ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top