fbpx
ಸಮಾಚಾರ

RCBಗೆ ದೊಡ್ಡ ಆಘಾತ: ನಾಯಕನ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ! RCBಗೆ ಮುಂದಿನ ನಾಯಕ ಯಾರು?

ಟೀಂಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದ ಸುದ್ದಿ ಇನ್ನೂ ಹಸಿರಾಗಿರುವಂತೆಯೇ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಹೌದು.. ವಿರಾಟ್ ಕೊಹ್ಲಿ ಹಾಲಿ 2021 ಐಪಿಎಲ್ ಸೀಸನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ಗುಡ್ ಬೈ ಹೇಳಲಿದ್ದಾರೆ.

 

 

ಈ ಬಗ್ಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನನ್ನು ಬೆಂಬಲಿಸಿದ ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಕೊಹ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.

“..ಆರ್​ಸಿಬಿ ಮ್ಯಾನೇಜ್ಮೆಂಟ್ ಜೊತೆ ಇಂದು ಸಂಜೆ ಈ ವಿಚಾರವಾಗಿ ಮಾತನಾಡಿದೆ. ಸ್ವಲ್ಪ ಕಾಲದಿಂದ ಈ ವಿಚಾರ ನನ್ನ ಮನಸಿನಲ್ಲಿತ್ತು. ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿಯಾಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿರುತ್ತೇನೆ…. ನಾನು ಫ್ರೆಶ್ ಅಗಿರಲು ಸಮಯ ಬೇಕಾಗುತ್ತದೆ. ನಾನು ಹೇಗೆ ಮುಂದುವರಿಯಬೇಕೆಂದು ಸ್ಪಷ್ಟವಾಗಿ ಅರಿಯಲು ಸಮಯ ಬೇಕಾಗುತ್ತದೆ…. ಇದು ಒಂಬತ್ತು ವರ್ಷಗಳ ಒಳ್ಳೆಯ ಪ್ರಯಾಣವಾಗಿದೆ. ಖುಷಿ, ಹತಾಶೆ, ನಿರಾಸೆ ಭಾವನೆಗಳು ಈ ಹಾದಿಯಲ್ಲಿ ನನಗೆ ಸಿಕ್ಕಿವೆ” ಎಂದು ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಹೇಳಿದ್ಧಾರೆ.

ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗೆ ಇಳಿಯದಿರುವುದರಿಂದ ಆರ್ಸಿಬಿ ತಂಡಕ್ಕೆ ಮುಂದಿನ ನಾಯಕ ಯಾರಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮುಂದಿನ ವರ್ಷದ ಐಪಿಎಲ್ ಗೆ ಮೆಗಾ ಹರಾಜು ಇರುವುದರಿಂದ ಮುಂದಿನ RCB ನಾಯಕ
ಯಾರು ಎಂಬುದು ಈಗಲೇ ಹೇಳುವುದು ಕಷ್ಟ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top