fbpx
ಐಪಿಎಲ್

ಇಂದು RCB vs CSK ಫೈಟ್: ಹೈವೋಲ್ಟೇಜ್ ಕಾದಾಟಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ!

ಐಪಿಎಲ್ 2021ರ ಎರಡನೇ ಚರಣದ ಪಂದ್ಯಗಳು ಭರದಿಂದ ಸಾಗುತ್ತಿದ್ದು ಟ್ರೂಫಿ ಮೇಲೆ ಕಣ್ಣಿಟ್ಟಿರುವ ಎಲ್ಲಾ ತಂಡಗಳು ತಮ್ಮದೇ ಶೈಲಿಯಲ್ಲಿ ತಂತ್ರಗಾರಿಕೆ ರೂಪಿಸುತ್ತಿವೆ. ಅಂತೆಯೇ ಬೆಂಗಳೂರು ತಂಡ ಕೂಡ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ.

ಐಪಿಎಲ್ 2021 ಮೊದಲ ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ RCB ಎರಡನೇ ಚಾರಣದ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇಂತಿಪ್ಪ RCB ಇಂದು ಮತ್ತೊಂದು ಬಲಿಷ್ಠ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಇನ್ನು ಮುಂಬೈ ವಿರುದ್ಧ 20 ರನ್‌ಗಳ ಅಧಿಕಾರಯುತ ಜಯ ಸಾಧಿಸಿದ ಧೋನಿ ನೇತೃತ್ವದ ಸಿಎಸ್‌ಕೆ ವಿಶ್ವಾಸ ಅಲೆಯಲ್ಲಿ ತೇಲುತ್ತಿದೆ. ಆರ್‌ಸಿಬಿ(RCB) ವಿರುದ್ಧವೂ ಇದೇ ಪ್ರದರ್ಶನ ತೋರಿ ಪ್ಲೇ ಆಫ್‌ಗೆ ಮತ್ತಷ್ಟು ಸನಿಹವಾಗುವ ಲೆಕ್ಕಾಚಾರದಲ್ಲಿದೆ.

ಆರ್‌ಸಿಬಿ ಬಳಗದಲ್ಲಿ ಬದಲಾವಣೆ ಅನುಮಾನ?
ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಕಣಕ್ಕಿಳಿಸಿದ್ದ ತಂಡವನ್ನೇ ಆರ್‌ಸಿಬಿ ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಕೆಲ ಯುವ ಆಟಗಾರರಿಗೆ ಅವಕಾಶ ಕೊಟ್ಟಿದ್ದ ಆರ್‌ಸಿಬಿ ತಂಡ ಸೂಪರ್‌ ಕಿಂಗ್ಸ್‌ ವಿರುದ್ಧದ ಕದನಕ್ಕೆ ಅವರನ್ನೇ ಆಯ್ಕೆ ಮಾಡಿ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ.

ಆರ್‌ಸಿಬಿ ಸಂಭಾವ್ಯ ಇಲೆವೆನ್
ವಿರಾಟ್ ಕೊಹ್ಲಿ (ನಾಯಕ),
ದೇವದತ್ ಪಡಿಕ್ಕಲ್,
ಶ್ರೀಕರ್ ಭರತ್ (ವಿಕೆಟ್‌ಕೀಪರ್‌),
ಗ್ಲೆನ್‌ ಮ್ಯಾಕ್ಸ್‌ವೆಲ್‌,
ಎಬಿ ಡಿ’ವಿಲಿಯರ್ಸ್‌,
ಸಚಿನ್ ಬೇಬಿ,
ವಾನಿಂದು ಹಸರಂಗ,
ಕೇಲ್‌ ಜೇಮಿಸನ್,
ಹರ್ಷಲ್‌ ಪಟೇಲ್,
ಮೊಹಮ್ಮದ್‌ ಸಿರಾಜ್,
ಯುಜ್ವೇಂದ್ರ ಚಹಲ್.

ಇನ್ನು ಪಾಯಿಂಟ್ಸ್ ಟೇಬಲ್ ನತ್ತ ಕಣ್ಣು ಹಾಯಿಸಿದರೆ ಚೆನ್ನೈ ಆಡಿರುವ 8 ಪಂದ್ಯಗಳಿಂದ 6 ಜಯ, 2 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್ ಸಿಬಿ ಸಹ ಇಷ್ಟೇ ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು 10 ಅಂಕ ಸೇರಿಸಿ, ಮೂರನೇ ಸ್ಥಾನದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top