fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ನಿಖಿಲ್ ಪತ್ನಿ ರೇವತಿ: ದೇವೇಗೌಡರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

 

 

ಮಗು ಆಗಮನದ ಬಗ್ಗೆ ಜೆಡಿಎಸ್ ಶಾಸಕ ಶರವಣ ಟ್ಟೀಟ್ ಮೂಲಕ ತಿಳಿಸಿದ್ದಾರೆ. ‘ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿರುವಂತಹ ವಿಷಯ. ಶಿರಡಿ ಸಾಯಿಬಾಬನ ಅನುಗ್ರಹ ಮಗುವಿನ ಮೇಲಿರಲೆಂದು ಆಶಿಸುತ್ತೇನೆ,’ ಎಂದು ಟ್ಟೀಟ್ ಮಾಡಿದ್ದಾರೆ.

2020ರ ಏಪ್ರಿಲ್​ನಲ್ಲಿ ರೇವತಿ ಜೊತೆ ನಿಖಿಲ್​ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಲಾಕ್​ಡೌನ್​ ನಿಯಮಗಳ ಅನುಸಾರ ಈ ಹೈಪ್ರೊಫೈಲ್​ ಕುಟುಂಬದಲ್ಲಿ ವಿವಾಹ ಸಮಾರಂಭ ನೆರವೇರಿತ್ತು. ಬಿಡದಿ ಬಳಿ ಇರುವ ಫಾರ್ಮ್​ಹೌಸ್​ನಲ್ಲಿ ರೇವತಿ ಮತ್ತು ನಿಖಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚಿಗಷ್ಟೇ ರೇವತಿಯವರಿಗೆ ಅದ್ದೂರಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top