fbpx
ಸಮಾಚಾರ

Indian Sign Language Dictionaryಯಲ್ಲಿ ಶಾರುಖ್ ಖಾನ್‌ ಹೆಸರು ಸೇರ್ಪಡೆ

ಭಾರತೀಯ ಚಿತ್ರರಂಗದಲ್ಲಿ ನಟ ಶಾರುಖ್ ಖಾನ್ ಅವರಿಗೆ ತಮ್ಮದೇ ಆದ ಪ್ರಮುಖ ಸ್ಥಾನವಿದೆ. ಯಾವುದೇ ಸಿನಿಮಾ ಹಿನ್ನಲೆ ಇಲ್ಲದೆ ಸಾಮಾನ್ಯ ಯುವಕನಾಗಿ ಚಿತ್ರರಂಗದಲ್ಲಿ ಶಾರುಖ್ ಎತ್ತರಕ್ಕೆ ಬೆಳೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿನ್ನೆಲೆ ಇವರ ಹೆಸರನ್ನು ಭಾರತೀಯ ಸಾಂಕೇತಿಕ ಭಾಷೆಯ ನಿಘಂಟಿನಲ್ಲಿ ಸೇರಿಸಲಾಗಿದೆ.

 

 

ಈ ನಿಘಂಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಇದು ಕಿಂಗ್ ಖಾನ್​ ಶಾರುಖ್ ಅವರ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ. ಶಾರುಖ್ ಖಾನ್‌ ಅವರನ್ನು ಬಲಗೈ ಬೆರಳುಗಳನ್ನು ಬಂದೂಕಿನಂತೆ ಎದೆಯ ಬಳಿ ಹಿಡಿದು ಎರಡು ಸಂಖ್ಯೆ ತೋರಿಸುವ ಚಿಹ್ನೆ ಬಳಸಿ ಹೇಳಬಹುದಾಗಿದೆ.

ಅಂದಹಾಗೆ ಸೈನ್ ಲಾಂಗ್ವೇಜ್ ನಿಘಂಟಿನ ಮೊದಲ ವರ್ಷನ್ 2018ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ3000 ಪದಗಳು ಇದ್ದವು. ಇದರಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಪ್ರಿಯಾಂಕ ಚೋಪ್ರಾ ಅವರ ಹೆಸರೂ ಈ ನಿಘಂಟಿನಲ್ಲಿ ಸೇರಿದೆ. ಭಾರತೀಯ ಸೈನ್ ಲಾಂಗ್ವೇಜ್ ರಿಸರ್ಚ್ ಹಾಗೂ ತರಬೇತಿ ಕೇಂದ್ರ ಈ ನಿಂಘಟಿನ ಇತ್ತೀಚಿನ ವರ್ಷನ್ ಬಿಡುಗಡೆ ಮಾಡಿದ್ದು 10 ಸಾವಿರ ಪದಗಳು ಇವೆ. ಇದನ್ನು 17 ಫೆಬ್ರವರಿ 2021ರಲ್ಲಿ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top