fbpx
ಸಮಾಚಾರ

ಕನಸಿನ ಕಾರನ್ನ ಖರೀದಿಸಿ ಖುಷಿಗೊಂಡ ಸುದೀಪ್ ನಾಯಕಿ ಮಮತಾ ಮೋಹನ್ ದಾಸ್

ಗೂಳಿ ಸಿನಿಮಾದಲ್ಲಿ ನಟ ಸುದೀಪ್ ಅವರಿಗೆ ನಾಯಕಿಯಾಗಿ ನಟಿಸಿರುವ ನಟಿ ಮಮತಾ ಮೋಹನ್ ದಾಸ್ ಇದೀಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಹೊಸ ಕಾರು..! ಹೌದು, ಐಷಾರಾಮಿ ಕಾರನ್ನ ಕೊಂಡುಕೊಂಡ ಸಂತಸದಲ್ಲಿ ನಟಿ ಮಮತಾ ಮೋಹನ್ ದಾಸ್ ತೇಲಾಡುತ್ತಿದ್ದಾರೆ.

ಮಮತಾ ಮೋಹನ್​​ದಾಸ್​ ಅವರ ಬಹಳ ವರ್ಷಗಳ ಕನಸು ಈಗ ನನಸಾಗಿದೆ. ಅವರು ಐಷಾರಾಮಿ ಪೋರ್ಷಾ 911 ಕ್ಯಾರೆರಾ ಕಾರನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಬೆಲೆ ಸುಮಾರು ಎರಡು ಕೋಟಿ ರೂಪಾಯಿ ಇದೆ. ಕಾರಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಕನಸು ಇಂದು ನನಸಾಗಿದೆ. ನಾನು ಇದಕ್ಕಾಗಿ ದಶಕದಿಂದ ಕಾಯುತ್ತಿದೆ. ನನ್ನ ಕುಟುಂಬದ ಹೊಸ ಮಗುವನ್ನು ಪರಿಚಯಿಸಲು ಖುಷಿಯಾಗುತ್ತಿದೆ. ಪೋರ್ಷಾ 911 ಕ್ಯಾರೆರಾ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ಕಾರಿನ ಬೆಲೆ 1.80 ಕೋಟಿ ರೂಪಾಯಿ ಇದೆ. ಟ್ಯಾಕ್ಸ್​ ಮೊತ್ತ ಸೇರಿದರೆ ಎರಡು ಕೋಟಿ ರೂಪಾಯಿ ದಾಟಲಿದೆ.

ಮಮತಾ 2005ರಲ್ಲಿ ಚಿತ್ರರಂಗಕ್ಕೆ ಬಂದರು. ಮಲಯಾಳಂನಲ್ಲಿ ಸಾಕಷ್ಟು ಚಿತ್ರ ಮಾಡಿದ ನಂತರ ಮಮತಾ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು. 2008ರಲ್ಲಿ ತೆರೆಗೆ ಬಂದ ಸುದೀಪ್ ನಟನೆಯ ಗೂಳಿ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡರು ಮಮತಾ. ಈ ಚಿತ್ರವೇ ಮೊದಲು ಮತ್ತು ಕೊನೆ. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top