fbpx
ಸಮಾಚಾರ

ಅನೈತಿಕ ಸಂಬಂಧ,ಅಬಾರ್ಷನ್ ಕುರಿತ ವದಂತಿಗಳ ಬಗ್ಗೆ ಕೊನೆಗೂ ಮೌನಮುರಿದ ನಟಿ ಸಮಂತಾ: ಹೇಳಿದ್ದೇನು ಗೊತ್ತೇ?

ನಾಗ ಚೈತನ್ಯ ಹಾಗೂಸಮಂತಾ ಅವರ ವಿಚ್ಛೇದನದ ವಿಚಾರ ಬಹಿರಂಗವಾಗ ಆಗುತ್ತಿದ್ದಂತೆಯೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಲಾರಂಭಿಸಿವೆ. ಅದರಲ್ಲೂ ಸಮಂತಾ ಅವರ ನಡತೆ ಬಗ್ಗೆ ವೈಯಕ್ತಿಕವಾಗಿ ದಾಳಿ ಮಾಡುವ ವದಂತಿಗಳು ಹರಿದಾಡುತ್ತಿವೆ. ಈ ಕುರಿತಾಗಿದೆ ಈಗ ನಟಿ ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

 

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಸಮಂತಾ, ಸಂಕಷ್ಟದ ಸಮಯದಲ್ಲಿ ನನ್ನ ಜೊತೆಗೆ ಇರುವವರಿಗೆ ಧನ್ಯವಾದ. ಇನ್ನು ನನ್ನ ಬಗ್ಗೆ ಹಲವು ಊಹಾಪೋಹಗಳು ಹರಡಿವೆ. ಬೇರೆಯವರೊಂದಿಗೆ ನಾನು ಸಂಬಂಧ ಇಟ್ಟುಕೊಂಡಿದ್ದೆ, ನಾನು ಅಬಾಶನ್ ಮಾಡಿಸಿಕೊಂಡಿದ್ದೆ ಹೀಗೆ ಹಲವು ವದಂತಿಗಳನ್ನು ಹಬ್ಬಿಸಲಾಗಿದ್ದು ಇವೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ವಿಚ್ಛೇದನದ ವಿಚಾರವೇ ನನ್ನನ್ನು ದೀರ್ಘಕಾಲ ದಂಡಿಸಲಿದೆ. ಇದರ ಜೊತೆಗೆ ಈ ರೀತಿಯ ವದಂತಿಗಳು ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಇದನ್ನು ಹೀಗೆ ಬಿಟ್ಟರೆ ನನ್ನ ವಿರುದ್ಧದ ವದಂತಿಗಳು ಕೊನೆಯಾಗುವುದಿಲ್ಲ. ಒಂದಲ್ಲ ಒಂದು ವದಂತಿಗಳನ್ನು ಹಬ್ಬಿಸುತ್ತಿರುತ್ತಾರೆ. ಇದನ್ನು ನಂಬಬೇಡಿ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top