fbpx
ಸಮಾಚಾರ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ನೆಡುಮುಡಿ ವೇಣು ನಿಧನ

500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಮತ್ತು ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದಿದ್ದ ಮಾಲಿಯಮ್ ಚಿತ್ರರಂಗದ ಹಿರಿಯ ನಟ ನೆಡುಮುಡಿ ವೇಣು ಅವರು ಸೋಮವಾರ ನಿಧನರಾಗಿದ್ದಾರೆ.

ಇತ್ತೀಚಿಗೆ ವೇಣು ಅವರು ಕೋವಿಡ್ ಕಾಯಿಲೆಗೆ ತುತ್ತಾಗಿ ಚೇತರಿಸಿಕೊಂಡಿದ್ದರು. ಕೋವಿಡ್ -19 ರಿಂದ ಚೇತರಿಸಿಕೊಂಡ ನಂತರ ಲಿವರ್ ಸಮಸ್ಸೆ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ 73 ವರ್ಷದ ವೇಣು ಅವರು ಚಿಕಿತ್ಸೆ ಪಲಕಾರಿಯಾಗಿದೇ ಇಂದು ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ನೆಡುಮುಡಿ ವೇಣು ಅವರು ‘ಕವಾಲಂ ನಾರಾಯಣ ಪಣಿಕೆರ್’ ನಾಟಕದ ಮೂಲಕ ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ನೆಡುಮುಡಿ ವೇಣು ಸಕ್ರಿಯವಾಗಿ ಕೆಲಸ ಮಾಡಿದ್ದು, ಅವರು ನಟಿಸಿದ ಸಿನಿಮಾಗಳ ಸಂಖ್ಯೆ 500ಕ್ಕೂ ಅಧಿಕವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top