fbpx
ಸಮಾಚಾರ

ಸಮಂತಾ ಜೊತೆ ಸ್ಟೈಲಿಸ್ಟ್ ಪ್ರೀತಂ ಸಂಬಂಧ ವದಂತಿ: ಪ್ರೀತಂಗೆ ಜೀವ ಬೆದರಿಕೆ, ನಾಗ ಚೈತನ್ಯ ವಿರುದ್ಧ ಪ್ರೀತಂ ಕೆಂಡಾಮಂಡಲ

ಟಾಲಿವುಡ್‍ ನಟ ನಾಗಚೈತನ್ಯ, ಸಮಂತಾ ವೈವಾಹಿಕ ಸಂಬಂಧ ಮುರಿದು ಬಿದ್ದು ಹಲವು ದಿನಗಳಾಗಿವೆ. ಆದರೆ ಈ ಜೋಡಿ ಬೇರೆಯಾಗುತ್ತಿದ್ದಂತೆ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಇನ್ನೊಂದು ವಿಚಾರ ಸೆರ್ಪಡೆಯಾಗಿದೆ. ಈ ಜೋಡಿ ಸಂಬಂಧ ಮುರಿದು ಬೀಳಲು ಸಮಂತಾರ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಕಾರಣ ಎಂಬ ವದಂತಿ ಹಬ್ಬಿದ್ದು, ಅದರ ಬೆನ್ನಲ್ಲೆ ಪ್ರೀತಂಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಕರೆಗಳು ಬರ ತೊಡಗಿವೆಯಂತೆ.

ಜುಕಾಲ್ಕರ್ ಅವರು ಸಮಂತಾ ಅವರ ಸ್ಟೈಲಿಸ್ಟ್ ಮಾತ್ರ ಆಗಿರಲಿಲ್ಲ. ಉತ್ತಮ ಸ್ನೇಹಿತರು. ಆದರೆ, ಸಮಂತಾ ಹಾಗೂ ನಾಗಚೈತನ್ಯ ದಂಪತಿಗಳು ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದ ನಂತರ ಸಮಂತಾ ಹಾಗೂ ಜುಕಾಲ್ಕರ್ ಅವರ ಕುರಿತು ವದಂತಿಗಳು ಕೇಳಿಬರುತ್ತಿದೆ. ಇವರಿಬ್ಬರ ನಡುವಿ ಇರುವ ಆತ್ಮೀಯತೆಯನ್ನು ಅಕ್ರಮ ಸಂಬಂಧಕ್ಕೆ ಕಲ್ಪಿಸಿ ಟೀಕೆ ಮಾಡಲಾಗುತ್ತಿದೆ. ಕೆಲವು ಯೂಟ್ಯೂಬರ್ ಗಳು ಜುಕಾಲ್ಕರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ವದಂತಿಗಳು ಇದೀಗ ಕೇಳಿ ಬಂದಿದೆ.

ತಮ್ಮ ಮತ್ತು ಸಮಂತಾ ನಡುವಿನ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರೀತಂ, ಚಾಯ್–ಸಮಂತಾ ಬೇರೆ ಬೇರೆಯಾಗಿದ್ದಕ್ಕೆ ನನಗೆ ಕೆಲವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ನೋವು ತೋಡಿಕೊಂಡಿದ್ದರು.

‘’ನಾನು ಸಮಂತಾರನ್ನ ‘’ಜಿಜಿ’’ ಅಂತ ಕರೆಯುತ್ತೇನೆ ಎಂದು ಎಲ್ಲರಿಗೂ ಗೊತ್ತು. ‘’ಜಿಜಿ’’ ಎಂದರೆ ಉತ್ತರ ಭಾರತದಲ್ಲಿ ಸಹೋದರಿ ಎಂದರ್ಥ. ಹೀಗಿರುವಾಗ, ನಮ್ಮಿಬ್ಬರ ನಡುವೆ ಅಫೇರ್ ಹೇಗೆ ಸಾಧ್ಯ? ಇಷ್ಟು ಕೀಳುಮಟ್ಟದಲ್ಲಿ ಜನ ಅದ್ಹೇಗೆ ಕಾಮೆಂಟ್ ಮಾಡ್ತಿದ್ದಾರೋ, ಗೊತ್ತಿಲ್ಲ. ಈ ಗಾಸಿಪ್‌ನಿಂದ ನಿಜಕ್ಕೂ ನನ್ನ ಹೃದಯ ಛಿದ್ರ ಛಿದ್ರಗೊಂಡಿದೆ’’ ಎಂದಿದ್ದಾರೆ ಸಮಂತಾ ಅವರ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್.

‘’ನನಗೆ ಸಮಂತಾ ಮತ್ತು ನಾಗ ಚೈತನ್ಯ.. ಇಬ್ಬರೂ ಬಹಳ ವರ್ಷಗಳಿಂದ ಪರಿಚಯ. ಸಮಂತಾ ಮತ್ತು ನನ್ನ ನಡುವೆ ಇರುವ ಸ್ನೇಹದ ಬಗ್ಗೆ ನಾಗ ಚೈತನ್ಯ ಅವರಿಗೂ ಗೊತ್ತಿದೆ. ಹೀಗಿರುವಾಗ, ನನ್ನ ಮತ್ತು ಸಮಂತಾ ಬಗ್ಗೆ ಈ ರೀತಿ ಕೀಳುಮಟ್ಟದ ಗಾಸಿಪ್ ಹಬ್ಬಿರುವಾಗ ನಾಗ ಚೈತನ್ಯ ಮಾತನಾಡಬಹುದಿತ್ತು. ಸಮಂತಾ ಮತ್ತು ಪ್ರೀತಂ ನಡುವೆ ಅಂಥದ್ದೇನಿಲ್ಲ, ಹಾಗೆಲ್ಲ ಕಾಮೆಂಟ್ ಮಾಡಬೇಡಿ ಎಂದು ನಾಗ ಚೈತನ್ಯ ಒಂದು ಹೇಳಿಕೆ ಬಿಡುಗಡೆ ಮಾಡಬಹುದಿತ್ತು. ಅದರಿಂದ ಎಷ್ಟೋ ಬದಲಾವಣೆ ಖಂಡಿತ ಆಗುತ್ತಿತ್ತು. ಆದರೆ ನಾಗ ಚೈತನ್ಯ ಮೌನಕ್ಕೆ ಶರಣಾಗಿದ್ದಾರೆ.’’ ಅಂತ ಪ್ರೀತಂ ಜುಕಾಲ್ಕರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top