fbpx
ಸಮಾಚಾರ

RCB ಸೋಲಿಗೆ ಡೇನಿಯಲ್‌ ಕ್ರಿಶ್ಚಿಯನ್ ಗರ್ಭಿಣಿ ಪತ್ನಿಯನ್ನು ಕೀಳಾಗಿ ಟೀಕಿಸಿದ ಫ್ಯಾನ್ಸ್‌: ಕಿಡಿಕಾರಿದ ಮ್ಯಾಕ್ಸ್‌ವೆಲ್‌ ಹೇಳಿದ್ದೇನು?

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಗ್ಗೆ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಐಪಿಎಲ್ 2021ರ ಫೈನಲ್‌ ಹಾದಿಯಲ್ಲಿ ಆರ್‌ಸಿಬಿ ನಿರ್ಗಮಿಸಿದ್ದು ಕಿಡಿಗೇಡಿ ಟ್ರೋಲರ್‌ಗಳಿಗೆ ತಮಾಷೆಯ ವಸ್ತುವಾಗಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಸೋತು ಸ್ಪರ್ಧೆ ಕೊನೆಗೊಳಿಸುತ್ತಲೇ ಟ್ರೋಲ್ ಹಾವಳಿ ಶುರುವಾಗಿದೆ.ಅದರಲ್ಲೂ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಡ್ಯಾನಿಯಲ್ ಕ್ರಿಶ್ಚಿಯನ್ ಮತ್ತು ಕುಟುಂದ ವಿರುದ್ಧ ಕೊಳಕು ಟ್ರಾಲ್ ಮಾಡಲಾಗಿತ್ತು.

ಇದೀಗ ಆರ್‌ಸಿಬಿ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಕೆಟ್ಟ ಮನಸ್ಸಿನ ಟ್ರೋಲರ್‌ಗಳ ವಿರುದ್ಧ ಕಿಡಿ ಕಾರಿದ್ದಾರೆ. “ತಂಡಕ್ಕಾಗಿ ತಮ್ಮೆಲ್ಲವನ್ನೂ ನೀಡಿದ ಆಟಗಾರರಿಗೆ ಪ್ರೀತಿ ಹಾಗೂ ಮೆಚ್ಚುಗೆಯನ್ನು ಹಂಚಿಕೊಂಡ ನಿಜವಾದ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ! ದುರದೃಷ್ಟವಶಾತ್ ಸೋಶಿಯಲ್‌ ಮೀಡಿಯಾವನ್ನು ಭಯಾನಕ ಸ್ಥಳವನ್ನಾಗಿಸುವ ಕೆಲವು ಭಯಾನಕ ಜನರಿದ್ದಾರೆ. ಇದು ನಿಜಕ್ಕೂ ಸ್ವೀಕಾರರ್ಹವಲ್ಲ!!! ದಯವಿಟ್ಟು ಅವರಂತೆ ಆಗಬೇಡಿ,” ಎಂದು ಗ್ಲೆನ್‌ ಮ್ಯಾಕ್ಸ್‌ವೆಲ್‌ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ಮತ್ತೊಂದು ಟ್ವೀಟ್‌ನಲ್ಲಿ “ನನ್ನ ತಂಡದ ಸಹ ಆಟಗಾರರಿಗೆ, ಕುಟುಂಬದ ಸದಸ್ಯರಿಗೆ ಹಾಗೂ ಸ್ನೇಹಿತರ ಬಗ್ಗೆ ನೀವೇನಾದರೂ ಕೆಟ್ಟದಾಗಿ ನಿಂದಿಸಿದರೆ, ಖಂಡಿತಾ ಎಲ್ಲರಿಂದ ನಿಮ್ಮನ್ನು ಬ್ಲ್ಯಾಕ್‌ ಮಾಡಿಸಲಾಗುತ್ತದೆ. ಇದರಲ್ಲಿ ಯಾವುದೇ ಕ್ಷಮೆ ಇಲ್ಲ,” ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top