ಕೆಜಿಎಫ್ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿ ದೇಶದ ಮೂಲೆ ಮೂಲೆಯಲ್ಲಿಯೂ ಮನೆ ಮಾತಾಗಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಸದ್ಯ ಬಹುಬೇಡಿಯ ಸಂಗೀತಗಾರರಾಗಿದ್ದು ಸಕತ್ ಬ್ಯುಸಿಯಾಗಿದ್ದಾರೆ.. ಈಗ ಹೊಸ ವಿಚಾರ ಏನೆಂದರೆ ರವಿ ಬಸ್ರೂರು ಅವರು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
🥰 VERY HAPPY AND EXCITED TO HAVE ASSOCIATED WITH THE BHAIJAAN OF INDIA @beingsalmankhan ❤️FOR MY FIRST MOVIE IN BOLLYWOOD FOR BACKGROUND SCORE AND SONGS . HOPING TO PLEASE YOU ALL GOIN FORWARD IN THIS JOURNEY 🙏🏼 ❤️@SKFilmsOfficial @sachin_basrur #BharathMadhusudanan pic.twitter.com/guY8SJ86KL
— Ravi Basrur (@RaviBasrur) October 13, 2021
ಈ ಬಗ್ಗೆ ಸ್ವತಃ ರವಿ ಬಸ್ರೂರು ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ’ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಅವರ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದೇನೆ. ನನ್ನ ಈ ಪಯಣಕ್ಕೆ ನಿಮ್ಮ ಬೆಂಬಲ ಇರಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರ ‘Antim: The Final Truth’ ಸಿನಿಮಾದಲ್ಲಿ ರವಿ ಬಸ್ರೂರು ಹಾಡುಗಳು, ಹಿನ್ನಲೆ ಸಂಗೀತ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಟೋಬರ್ 12ರಂದು ಈ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಮೋಶನ್ ಪೋಸ್ಟರ್ ಅಲ್ಲಿರುವ ಬ್ಯಾಕ್‌ಗ್ರೌಂಡ್ ಸ್ಕೋರ್ ಕೂಡ ಈಗಾಗಲೇ ಜನರ ಗಮನ ಸೆಳೆದು, ಮೆಚ್ಚುಗೆ ಗಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ವೈರಲ್ ಆಗ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
