fbpx
ಸಮಾಚಾರ

ತಾಯಿಯಾಗಿರುವ ವಿಷಯವನ್ನು 2 ವರ್ಷದ ಬಳಿಕ ಬಹಿರಂಗಪಡಿಸಿದ ಶ್ರಿಯಾ ಶರಣ್

ಕನ್ನಡ ಚಿತ್ರರಂಗ ಸೇರಿದಂತೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿ ಶ್ರಿಯಾ ಶರಣ್ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಶ್ರಿಯಾ ಶರಣ್ 2018ರಲ್ಲಿ ರಷ್ಯನ್ ಬಾಯ್‌ಫ್ರೆಂಡ್ ಆಂಡ್ರೇ ಕೊಶ್ಚೀವ್‌ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟರು.

ಮದುವೆಯಾದ್ಮೇಲೂ ಚಿತ್ರರಂಗದಲ್ಲಿ ಶ್ರಿಯಾ ಶರಣ್ ಬಿಜಿಯಾಗಿದ್ದಾರೆ. ಈಗಲೂ ಅವರ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ಹೀಗಿರುವಾಗಲೇ, ತಮ್ಮ ಅಭಿಮಾನಿಗಳಿಗೆಲ್ಲಾ ನಟಿ ಶ್ರಿಯಾ ಶರಣ್ ಒಂದು ಸರ್‌ಪ್ರೈಸ್ ನೀಡಿದ್ದಾರೆ. ತಾವು ತಾಯಿಯಾಗಿರುವ ವಿಚಾರವನ್ನು ನಟಿ ಶ್ರಿಯಾ ಶರಣ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಶ್ರಿಯಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

ತಾಯಿಯಾ ಸುದ್ದಿ ಘೋಷಣೆ ಮಾಡಲು ಶ್ರೇಯಾ ಶರಣ್ ಒಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮತ್ತು ಪತಿ ಆಂಡ್ರೇ ಕೊಶ್ಚೀವ್ ಅವರ ಹೆಣ್ಣು ಮಗುವಿನೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ತಾವು ಗರ್ಭಿಣಿಯಾಗಿದ್ದ ಸಂದರ್ಭದ ಚಿತ್ರದ ತುಣುಕುಗಳನ್ನು ಹಂಚಿಕೊಳ್ಳುತ್ತಾ, ಶ್ರೇಯಾ ತಾವು ಗರ್ಭ ಧರಿಸಿದ ವರ್ಷವನ್ನು 2020 ಎಂದು ಬರೆದುಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. 2020ರಲ್ಲಿ ನಾವು ಸುಂದರ ಕ್ಯಾರಂಟೈನ್ ಅನುಭವಿಸಿದೆವು. ಇಡೀ ಪ್ರಪಂಚವು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ನಮ್ಮ ಪ್ರಪಂಚವು ಶಾಶ್ವತವಾಗಿ ಬದಲಾಯಿತು …. ಜಗತ್ತು ಹಲವು ಸಾಹಸ ಮಾಡುತ್ತಿದ್ದಾಗ ನಮ್ಮ ಜಗತ್ತಿಗೆ ಒಂದು ದೇವತೆಯ ಆಗಮನವಾಯಿತು. ಇದಕ್ಕಾಗಿ, ನಾವು ದೇವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ! ’ಎಂದು ಬರೆದುಕೊಂಡಿದ್ದಾರೆ.

ತಮಗೆ ಮಗು ಜನಿಸಿದ ವಿಚಾರವನ್ನು ವರ್ಷದ ಬಳಿಕ ಬಹಿರಂಗ ಪಡಿಸಿದ ಶ್ರಿಯಾ ಶರಣ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಶ್ರಿಯಾ ಶರಣ್ ದಂಪತಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top