fbpx
ಸಮಾಚಾರ

ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್​ ಗುಡ್​ ನ್ಯೂಸ್

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ನಟನೆಗೆ ಮರಳಿದ್ದಾರೆ. ಇಷ್ಟು ದಿನ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ ರಾಜ್ ಇದೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾಗೆ ಇನ್ನೇನು ಒಂದು ವರ್ಷ ತುಂಬಲಿದ್ದು, ನಟಿ ಮೇಘನಾ ರಾಜ್ ಹೊಸ ಸಿನಿಮಾವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

 

 

ಮೇಘನಾ ರಾಜ್​ ಅವರು ದೀರ್ಘ ಗ್ಯಾಪ್​ ಬಳಿಕ ಮತ್ತೆ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಚಿರಂಜೀವಿ ಸರ್ಜಾ ಅವರ ಸ್ನೇಹಿತ ಪನ್ನಗ ಭರಣ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ವಾಸುಕಿ ವೈಭವ್​, ಹೊಸ ನಿರ್ದೇಶಕ ವಿಶಾಲ್​ ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ರಾಜ್​ ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ.

ನಾಳೆ (ಅ.17) ಚಿರಂಜೀವಿ ಸರ್ಜಾ ಜನ್ಮದಿನ. ಆ ಪ್ರಯುಕ್ತ ಮೇಘನಾ ರಾಜ್​ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಪಿ.ಬಿ. ಸ್ಟುಡಿಯೋಸ್​ ಲಾಂಛನದಲ್ಲಿ ಈ ಚಿತ್ರ ಮೂಡಿಬರಲಿದೆ. ಚಿತ್ರದ ಶೀರ್ಷಿಕೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top