fbpx
ಸಮಾಚಾರ

ಅಕ್ಟೋಬರ್ 16: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಅಕ್ಟೋಬರ್ 16, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಏಕಾದಶೀ 5:37 pm
ನಕ್ಷತ್ರ : ಧನಿಷ್ಠ 9:21 am
ಯೋಗ : ಗಂಡ 10:41 pm
ಕರಣ : ವಿಷ್ಟಿ 5:37 pm ಬಾವ 5:34 am

Time to be Avoided
ರಾಹುಕಾಲ : 9:09 am – 10:37 am
ಯಮಗಂಡ : 1:32 pm – 3:00 pm
ದುರ್ಮುಹುರ್ತ : 6:13 am – 7:00 am, 7:00 am – 7:47 am
ವಿಷ : 4:43 pm – 6:21 pm
ಗುಳಿಕ : 6:13 am – 7:41 am

Good Time to be Used
ಅಮೃತಕಾಲ : 2:31 am – 4:09 am
ಅಭಿಜಿತ್ : 11:41 am – 12:28 pm

Other Data
ಸೂರ್ಯೋದಯ : 6:09 am
ಸುರ್ಯಾಸ್ತಮಯ : 6:00 pm
ರವಿರಾಶಿ : ಕನ್ಯ
ಚಂದ್ರರಾಶಿ : ಕುಂಭ

 

 

ಕೋಪತಾಪಗಳನ್ನು ಕಡಿಮೆ ಮಾಡಿಕೊಂಡಲ್ಲಿ ಈ ದಿನವನ್ನು ಸುಂದರವಾಗಿ ಕಳೆಯಬಹುದು. ನಿಮ್ಮನ್ನು ಕೆರಳಿಸುವ, ಪ್ರಚೋದಿಸುವ ಹಲವು ವಿದ್ಯಮಾನಗಳು ನಡೆಯುವ ಸಾಧ್ಯತೆಯಿದೆ. ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನಿದ್ದು ಬಿಡಿ.

 ಮನೆಗೆ ಹೊಸ ಅತಿಥಿ ಬರುವ ಸಂಭವ. ಬಂಧುಗಳು, ಸ್ನೇಹಿತರು ನಿಮ್ಮ ಮೇಲೆ ಅಧಿಕ ವಿಶ್ವಾಸವನ್ನು ಇಡುವರು. ಕೌಟುಂಬಿಕ ಜೀವನ ನೆಮ್ಮದಿಯುತವಾಗಿರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಇತರೆಯವರು ಮಾಡುವ ತಪ್ಪಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಮುಸುಕಿನ ಗುದ್ದಾಟಕ್ಕೆ ತೆರೆ ಬೀಳಲಿದೆ.

ಬದುಕಿನ ದಾರಿ ಸುಗಮವಾಗಿದ್ದು ನಿಮ್ಮ ಮನೋರಥಗಳು ಈಡೇರುವುದು. ಉತ್ತಮ ತೀರ್ಮಾನ ಕೈಕೊಂಡು ಸನ್ನಿವೇಶವನ್ನು ನಿಭಾಯಿಸುವಿರಿ. ಈ ದಿನ ನಿಮ್ಮ ಹಳೆಯ ಸ್ನೇಹಿತನ ಭೇಟಿ ಆಗಿ ಹಳೆಯ ನೆನಪುಗಳನ್ನು ಸವಿಯುವಿರಿ.

 

ನಗುವಾಗ ಎಲ್ಲಾ ನೆಂಟರು. ಅಳುವಾಗ ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ. ಇದುವರೆಗೂ ನಿಮ್ಮ ಸುತ್ತಲಿದ್ದ ಜನರು ಕ್ರಮೇಣ ಕಡಿಮೆಯಾಗುತ್ತಿರುವರು. ಕಾರಣ ನಿಮ್ಮ ಆರ್ಥಿಕ ಸ್ಥಿತಿ ಎಂದು ಬೇರೆ ಹೇಳಬೇಕಾಗಿಲ್ಲ. ಆದಷ್ಟು ತಾಳ್ಮೆಯಿಂದ ಇರಿ.

 

ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗುವುದು. ವೃತ್ತಿಯಲ್ಲಿ ಆಯ್ಕೆಯಾದರೂ ಅದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳ ಸಹಿಗಾಗಿ ಕಾಯಬೇಕಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ನಿಮ್ಮ ಕಾರ್ಯಗಳು ಸರಾಗವಾಗಿ ಆಗುವವು.

 

ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದರಿಂದ ಸ್ನೇಹಿತರೊಂದಿಗೆ ಸಂತೋಷಕೂಟವನ್ನು ಏರ್ಪಡಿಸುವಿರಿ. ಮಾತಾ-ಪಿತರ ಆಶೀರ್ವಾದದಿಂದ ಉತ್ತಮ ಹೆಸರನ್ನು ಪಡೆಯುವಿರಿ.

 

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕಾಣುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆಂಜನೇಯ ಸ್ತೋತ್ರವನ್ನು ಪಠಿಸುತ್ತಿರಿ. ಕೆಲಸ ಕಾರ್ಯಗಳು ಸಕಾಲದಲ್ಲಿ ಮುಗಿಸಲು ಆಗಲಿಲ್ಲ ಎಂಬ ಬೇಸರ ಮೂಡುವುದು.

 

ಮಿತ್ರರು ನಿಮ್ಮ ಬೆಂಬಲಕ್ಕೆ ಬರುವರು. ಮಾನಸಿಕ ಹಾಗೂ ದೈಹಿಕ ಅನಾರೋಗ್ಯದಿಂದ ಬಳಲಿದಂತೆ ಕಾಣುವ ನೀವು ಸ್ನೇಹಿತರ ಹಿತನುಡಿಗಳಿಂದ ಚಟುವಟಿಕೆಯುಳ್ಳವರಾಗುವಿರಿ. ಮುಖದಲ್ಲಿ ಮಂದಹಾಸ ಮೂಡುವುದು.

ಅತ್ಯಂತ ಭಾವುಕರಾದ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರಗಳನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ಬರುವುದು. ದುರ್ಗಾ ಜಪ ಮಾಡಿ.

 

 

ಇಂದು ಎಲ್ಲವೂ ಇದ್ದು ನಿಮಗೆ ಸಕಾಲಕ್ಕೆ ಯಾವುದೂ ದೊರೆಯುವುದಿಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಿಮ್ಮದಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷ ಣಿಕ ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಇದಕ್ಕೆ ಮಕ್ಕಳ ಸಲಹೆಯೂ ಪೂರಕವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top