fbpx
ಸಮಾಚಾರ

ಶಾಕಿಂಗ್: ಭಾರತ ಅಂಡರ್-19 ತಂಡದ ಮಾಜಿ ನಾಯಕ ನಿಧನ

ಭಾರತೀಯ ಅಂಡರ್ 19 ಕ್ರಿಕೆಟ್ ತಂಡದ ಮಾಜಿ ನಾಯಕ, ಸೌರಾಷ್ಟ್ರದ ಯುವ ಬ್ಯಾಟ್ಸಮನ್ ಅವಿ ಬರೋಟ್ ಅವರು ಶುಕ್ರವಾರ ನಿಧನರಾದರು. 2019-20ರಲ್ಲಿ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡದ ಸದಸ್ಯನಾಗಿದ್ದ ಅವಿ ಬರೋಟ್, 29ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅ.15ರ ಸಂಜೆ ತೀವ್ರ ಹೃದಯಾಘಾತದಿಂದ ಅವಿ ನಿಧನರಾದರು ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್​ನ ಅಧ್ಯಕ್ಷ ಜಯದೇವ್ ಶಾ, “ಅವಿ ಇನ್ನಿಲ್ಲ ಎಂಬುದು ತುಂಬಾನೆ ಬೇಸರ ತರಿಸಿದೆ. ಅವನೊಬ್ಬ ಗ್ರೇಟ್ ಟೀಮ್​ಮೇಟ್ ಕ್ರಿಕೆಟ್ ಬಗ್ಗೆ ಅತ್ಯುತ್ತಮ ಸ್ಕಿಲ್ ಉಳ್ಳ ಆಟಗಾರನಾಗಿದ್ದ. ಇತ್ತೀಚಿನ ಎಲ್ಲ ದೇಶೀಯ ಕ್ರಿಕೆಟ್​ನಲ್ಲಿ ಇವರು ಅದ್ಭುತ ಪ್ರದರ್ಶನ ತೋರಿದ್ದರು. ಎಲ್ಲರ ಜೊತೆಗೆ ಸ್ನೇಹದಿಂದ ಇರುತ್ತಿದ್ದರು. ಈ ವಿಚಾರ ತಿಳಿದು ನಮಗೆ ನಂಬಲೇ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.

 

 

ಬಲಗೈ ಬ್ಯಾಟರ್ ಆಗಿದ್ದ ಅವಿ ಬರೋಟ್, ಆಫ್‌ ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಿದ್ದರು. ಅವಿ ಬರೋಟ್ 38 ಪ್ರಥಮ ದರ್ಜೆ ಪಂದ್ಯಗಳು, 38 ಲಿಸ್ಟ್‌ ಎ ಪಂದ್ಯಗಳು ಹಾಗೂ 20 ದೇಶಿ ಟಿ20 ಪಂದ್ಯಗಳನ್ನಾಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅವಿ ಬರೋಟ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,547 ರನ್‌, ಲಿಸ್ಟ್ ‘ಎ’ ಕ್ರಿಕೆಟ್‌ ನಲ್ಲಿ 1,030 ರನ್‌ ಹಾಗೂ ಟಿ20 ಕ್ರಿಕೆಟ್‌ (T20 Cricket) ನಲ್ಲಿ 717 ರನ್‌ ಬಾರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top