fbpx
ಸಮಾಚಾರ

ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಕುಮಾರಸ್ವಾಮಿ: ಜಮೀರ್ ಬಾಂಬ್

ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಉಪಮುಖ್ಯಮಂತ್ರಿ ಆಗುವುದನ್ನ ಹೆಚ್.ಡಿ ಕುಮಾರಸ್ವಾಮಿ ಅವರೇ ತಡೆದಿದ್ದರು ಎಂದು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ ಖಾನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಹೌದು ಕುಮಾರಸ್ವಾಮಿ ಯಾರನ್ನು ಸಹಿಸಿಕೊಳ್ಳುವುದಿಲ್ಲ, ಅವರು ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ. ರೇವಣ್ಣ ಅವರು ಡಿಸಿಎಂ ಆಗುವುದನ್ನು ತಪ್ಪಿಸಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧವಾಗಿ ಬಾಂಬ್ ಸಿಡಿಸಿದ್ದಾರೆ.

20-20 ಸರ್ಕಾರದಲ್ಲಿ ಅವರು ಬಿಜೆಪಿಗೆ ಯಾಕೆ ಅಧಿಕಾರ ಬಿಟ್ಟುಕೊಡಲಿಲ್ಲ ಗೊತ್ತಾ? ಎಚ್.ಡಿ ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ‌ ಕಾರಣಕ್ಕೆ ಅಂದು ಕುಮಾರಸ್ವಾಮಿ ಬಿಎಸ್ ವೈ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಸ್ವತಃ ಅವರ ಅಣ್ಣ ಬೆಳೆಯೊದನ್ನ ಕುಮಾರಸ್ವಾಮಿ ಸಹಿಸಲಿಲ್ಲ. ಇನ್ನು ಅಲ್ಪಸಂಖ್ಯಾತರು ಬೆಳೆಯೋದನ್ನ ಕುಮಾರಸ್ವಾಮಿ ಸಹಿಸ್ತಾರಾ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲ.” ಎಂದು ಕುಮಾಸ್ವಾಮಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top