fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ‘ಕುಲವಧು’ ಧಾರಾವಾಹಿ ನಟಿ

ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅವರು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಅಮೃತಾ ಅವರ ಪತಿ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ ಸ್ಟಾ ಸ್ಟೋರಿಯಲ್ಲಿ ಈ ಖುಷಿ ವಿಚಾರವನ್ನು ಶೇರ್ ಮಾಡಿಕೊಂಡಿರುವ ರಾಘವೇಂದ್ರ ಅವರು ‘ದೇವತೆಯ ಆಗಮನವಾಗಿದೆ’ ಎಂದು ಹೇಳುವ ಮೂಲಕ ಹೆಣ್ಣು ಮಗುವಿನ ತಂದೆಯಾಗಿರುವುದಾಗಿ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ರಾಘವೇಂದ್ರ ಹಾಗೂ ಅಮೃತಾ ಮೇ ತಿಂಗಳಿನಲ್ಲಿ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ತಾವು ತಂದೆ-ತಾಯಿಯಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದರು. ರಾಘವೆಂದ್ರ ಗೌಡ ಹಾಗೂ ನಟಿ ಅಮೃತಾ ರಾಮಮೂರ್ತಿ ದಂಪತಿ ಇತ್ತೀಚೆಗೆ ಸೀಮಂತ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಸೀಮಂತ ಸಮಾರಂಭದ ಫೋಟೋಗಳನ್ನು ಅಮೃತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top