fbpx
ಸಮಾಚಾರ

ನಟಿ ಸಂಜನಾಗೆ ಆಪ್ತನಿಂದಲೇ ವಂಚನೆ: ಸ್ನೇಹಿತ ರಾಹುಲ್ ವಿರುದ್ಧ ವಂಚನೆ ದೂರು ನೀಡಿದ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಜನಾ ಗಲ್ರಾಣಿಗೆ ಸ್ನೇಹಿತನಿಂದಲೇ ವಂಚನೆಯಾಗಿದ್ದು ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕ್ಯಾಸಿನೊದಲ್ಲಿ ಹಣ ಹೂಡಿಕೆ ಮಾಡುವುದಾಗಿ ರಾಹುಲ್ ಥೋನ್ಸೆ ಸಂಜನಾಗೆ ಕಳೆದ ಮೂರು ವರ್ಷಗಳಿಂದ ಹಣದ ಹೂಡಿಕೆ ವಿಚಾರದಲ್ಲಿ ವಂಚನೆ ಎಸಗಿರುವುದು ಗೊತ್ತಾಗಿದ್ದು ಇಂದಿರಾನಗರ ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ಶ್ರೀಮತಿ ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಈ ಸಂಬಂಧ ಇಂದಿರಾನಗರ ಪೊಲೀಸರು ರಾಹುಲ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ‘ತಾನು ಗೋವಾ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿರುವ ಕ್ಯಾಸಿನೊಗಳಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿರುವುದಾಗಿ ತಿಳಿಸಿದ್ದ ರಾಹುಲ್, ಕ್ಯಾಸಿನೊಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ‌ ಲಾಭ ಗಳಿಸಬಹುದೆಂದು ಆಮಿಷ ಒಡ್ಡಿದ್ದ. ಆತನ ಮಾತು ನಂಬಿ ಕಳೆದ ಮೂರು ವರ್ಷಗಳಿಂದ ರಾಹುಲ್ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಸುಮಾರು ₹ 45 ಲಕ್ಷ ಹಣ ಹಾಕಿದ್ದೆ’ ಎಂದು ಸಂಜನಾ ತಿಳಿಸಿದ್ದಾರೆ.

‘ರಾಹುಲ್ ಇದುವರೆಗೂ ಯಾವುದೇ ಲಾಭಾಂಶ ನೀಡಿಲ್ಲ.ಹಣ ಕೇಳಿದರೂ ಹಿಂದಿರುಗಿಸಿಲ್ಲ. ತಾನು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಮಾಡಿಕೊಂಡಿದ್ದಾನೆ. ನನ್ನ ಘನತೆಗೆ ಧಕ್ಕೆ ತರುವಂತಹ ಆರೋಪಗಳನ್ನೂ ಮಾಡಿದ್ದಾನೆ’ ಎಂದು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top