ಭಾರತ ತಂಡದ ಅವಕಾಶ ವಂಚಿತ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ದಿನೇಶ್ ಕಾರ್ತಿಕ್ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ದಿನೇಶ್ ಕಾರ್ತಿಕ್ ಪತ್ನ ಭಾರತದ ಸ್ಟಾರ್ ಸ್ಕ್ವಾಷ್ ಪಟು ದೀಪಿಕಾ ಪಳ್ಳಿಕಲ್ ಗುರುವಾರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
And just like that 3 became 5 🤍
Dipika and I have been blessed with two beautiful baby boys 👶Kabir Pallikal Karthik
Zian Pallikal Karthikand we could not be happier ❤️ pic.twitter.com/Rc2XqHvPzU
— DK (@DineshKarthik) October 28, 2021
ಈ ಸಿಹಿಯಾದ ವಿಚಾರವನ್ನು ದಿನೇಶ್ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ದಿನೇಶ್ ಕಾರ್ತಿಕ್, ಪತ್ನಿ ಮತ್ತು ಮಕ್ಕಳೊಂದಿಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ, ನೋಡ ನೋಡುತ್ತಿದ್ದಂತೆ ಮೂರು ಈಗ ಐದಾಗಿದೆ. ದೀಪಿಕಾ ಮತ್ತು ನನಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಜನಿಸಿದ್ದಾರೆ. ಕಬೀರ್ ಪಳ್ಳಿಕಲ್ ಕಾರ್ತಿಕ್, ಝಿಯಾನ್ ಪಳ್ಳಿಕಲ್ ಕಾರ್ತಿಕ್ ಇದಕ್ಕಿಂತಲೂ ಸಂಭ್ರಮ ಸಿಗಲಾರದು ಎಂದು ತಮ್ಮ ಟ್ವಿಟ್ಟರ್ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ವಿಶೇಷ ಅಂದರೆ ಅವಳಿ ಗಂಡು ಮಕ್ಕಳ ಹೆಸರನ್ನು ದಿನೇಶ್ ಕಾರ್ತಿಕ್ ಬಹಿರಂಗ ಪಡಿಸಿದ್ದಾರೆ. ಕಬಿರ್ ಪಲ್ಲಿಕಲ್ ಕಾರ್ತಿಕ್ ಹಾಗೂ ಝಿಯಾನ್ ಪಲ್ಲಿಕಲ್ ಕಾರ್ತಿಕ್ ಎಂದು ಹೆಸರಿಟ್ಟಿದ್ದಾರೆ. ಪತ್ನಿ ದೀಪಿಕಾ ಪಲ್ಲಿಕಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
