fbpx
ಸಮಾಚಾರ

ಪುನೀತ್ ನಿಧನ: ತಮಿಳು ನಟರ ವಿರುದ್ಧ ಪ್ರಥಮ್ ಕಿಡಿ

ನಟ ಪುನೀತ್ ರಾಜ್​ಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಆದರೆ ಅಪ್ಪು ಅಂತಿಮ ದರ್ಶನಕ್ಕೆ ಯಾವುದೇ ತಮಿಳು ತಾರೆಯರು ಬಂದಿಲ್ಲ ಎಂದು ಮತ ಪ್ರಥಮ್ ಕಿಡಿಕಾರಿದ್ದಾರೆ.

 

 

ಪ್ರಥಮ್ ತಮಿಳುನಟರ ವಿರುದ್ಧ ತೀವ್ರ ಕಿಡಿಕಾರಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಥಮ್, ‘ಅಪ್ಪು ಸರ್ ಸತ್ತ 3ನೇ ದಿನ ಮಣ್ಣಾದ್ರು! ತಮಿಳಿನ ಕಲಾವಿದರು ಅಂತಿಮದರ್ಶನಕ್ಕೆ ಬಂದ್ರಾ? ರಜನಿಕಾಂತ್ ಗೆ ಹುಶಾರಿಲ್ಲ OK,ಮಿಕ್ಕವರು ಏನ್ ಕಿತ್ತಾಕ್ತಿದ್ರಿ? ನಮ್ಮವರಿಗೆ ಸ್ವಾಭಿಮಾನ ಇದ್ರೆ ಅವ್ರ ಸಿನಿಮಾ ನೋಡ್ಬೇಡಿ!ಹಾಗೇ ಕರ್ನಾಟಕದಲ್ಲಿ ರಿಲೀಸ್ ಮಾಡ್ಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪುನೀತ್ ಅಂತ್ಯಕ್ರಿಯೆ ವೇಳೆ ಕರ್ತವ್ಯ ನಿರ್ವಹಿಸಿದ ಬೆಂಗಳೂರು ಪೊಲೀಸರ ಪರಿಶ್ರಮವನ್ನು ಶ್ಲಾಗಿಸಿರುವ ಪ್ರಥಮ್, ‘ಹೆಲ್ಮೆಟ್ ವಿಚಾರಕ್ಕೆ, ಟ್ರಾಫಿಕ್ ಅಲ್ಲಿ 2 ನಿಮಿಷ ತಡವಾದ್ರೆ ಪೊಲೀಸರ ಜೊತೆ ಜಗಳಮಾಡಿ ಸಣ್ಣಪುಟ್ಟದ್ದನ್ನೂವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕ್ತಿದ್ರಲ್ಲಾ, ಸತತ 48 ಗಂಟೆಯಿಂದ ಒಬ್ಬ ಪೋಲೀಸ್ ಮಲಗಿಲ್ಲ. ಅಪ್ಪು ಸರ್ ಚಿರನಿದ್ರೆಗೆ ತೊಂದರೆಯಾಗದಂತೆ ಹಗಲಿರುಳು ದುಡಿದ ನಮ್ಮ ಪೊಲೀಸರಿಗೆ ಗೆ ಗೌರವನಮನ! ಇನ್ಮೇಲಾದ್ರೂ ನಮ್ಮ ಪೋಲೀಸರನ್ನ ಗೌರವಿಸೋಣ! ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top