ತಮಿಳಿನಲ್ಲಿ ನಿರ್ಮಾಣಗೊಂಡು ತೆಲುಗು, ಹಿಂದಿ, ಕನ್ನಡ ಹಾಗೂ ಮಲೆಯಾಳಂಗೆ ಡಬ್ ಆಗಿ, ಅಮೆಜಾನ್ ಫ್ರೈಮ್ನಲ್ಲಿ ನಿನ್ನೆಯಷ್ಟೇ ಬಿಡುಗಡೆಯಾಗಿರುವ ಸೂರ್ಯಾ ನಟನೆಯ ‘ಜೈ ಭೀಮ್‘ ಸಿನಿಮಾ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಈ ಮಧ್ಯೆ ಸಿನಿಮಾದಲ್ಲಿ ಬರುವ ಒಂದು ದೃಶ್ಯದ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕಾಶ್ ರಾಜ್ ವಿರುದ್ಧ ಸಾಕಷ್ಟು ಜನರು ದ್ವೇಷ ಕಾರುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಕನ್ನಡ ನಟನ ಪರವಾಗಿ ಧ್ವನಿ ಎತ್ತಿದ್ದಾರೆ.
ಕನ್ನಡದಲ್ಲಿ ಮಾತನಾಡೋ…
ಪ್ರಕಾಶ್ ರಾಜ್ ಅವರು ಜೈ ಭೀಮ್ ಚಲನಚಿತ್ರದಲ್ಲಿ ಕಪಾಳಕ್ಕೆ ಹೊಡೆದದ್ದು, ತಟ್ಟಬೇಕಾದವರಿಗೆ ಸರಿಯಾಗಿ ತಟ್ಟಿದೆ.#JaiBhim #StopHindiImposition #ServeInMyLanguage #ಜೈಭೀಮ್ #ಹಿಂದಿಹೇರಿಕೆ_ನಿಲ್ಲಿಸಿ #ಹಿಂದಿಹೇರಿಕೆನಿಲ್ಲಿಸಿ pic.twitter.com/SJkTJLQ0K2
— Faizal Peraje 🇮🇳 (@FaizalPeraje) November 3, 2021
ದೃಶ್ಯದಲ್ಲಿ ಇರುವುದೇನು?
ಚಿತ್ರದ ಸನ್ನಿವೇಶವೊಂದರಲ್ಲಿ ನಟ ಪ್ರಕಾಶ್ ರೈ ಹಾಗೂ ಅಟೆಂಡರ್ ನಡುವೆ ಸಂಭಾಷಣೆ ನಡೆಯುತ್ತಿರುತ್ತದೆ. ಈ ವೇಳೆ ಹಿಂದಿಯಲ್ಲಿ ಮಾತನಾಡಿದ ಅಟೆಂಡರ್ನಿಗೆ ಅಧಿಕಾರಿಯಾಗಿ ನಟಿಸಿರುವ ಪ್ರಕಾಶ್ ರಾಜ್ ಕೆನ್ನೆಗೆ ಭಾರಿಸುತ್ತಾರೆ. ‘ಕನ್ನಡದಲ್ಲಿ ಮಾತನಾಡು‘ ಎಂದು ಗದರಿಸುತ್ತಾರೆ. ನಂತರ ಆತ ಕನ್ನಡದಲ್ಲಿ ಮಾತನಾಡುತ್ತಾನೆ. ಹಾಗೆಯೇ ತೆಲುಗು ಅವತರಣಿಕೆಯ ಸಿನಿಮಾದಲ್ಲಿ ತೆಲುಗಿನಲ್ಲಿಯೂ ಮತ್ತು ತಮಿಳು ಅವತರಣಿಕೆಯಲ್ಲಿ ತಮಿಳಿನಲ್ಲಿ ಮಾತನಾಡಲೂ ಪ್ರಕಾಶ್ ರೈ ಹೇಳುತ್ತಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕನ್ನಡಿಗರೂ ಸೇರಿದಂತೆ ತಮಿಳು ಹಾಗೂ ತೆಲುಗು ಮಂದಿ ಕೂಡ ನಟ ಪ್ರಕಾಶ್ ರೈ ಅವರಿಗೆ ಬೆಂಬಲ ಸೂಚಿಸುತ್ತೀದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
