ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಈ ಮದ್ಯೆ ವೈರಲ್ ಆಗಿರುವ ಪುನೀತ್ ಅವರಿಗೆ ಸಂಭಂದಪಟ್ಟ ವಿಚಾರವೊಂದರ ಹಿಂದಿನ ರಹಸ್ಯ ಬಯಲಾಗಿದೆ.
ಪುನೀತ್ ವಾಕಿಂಗ್ ಮಾಡುತ್ತಿರುವ ಫೋಟೋವೊಂದು ಅವರು ನಿಧನಗೊಂಡ ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಫೋಟೋದಲ್ಲಿ ಅಪ್ಪು ತಮ್ಮ ಕೈಯನ್ನು ಎದೆ ಮೇಲೆ ಹಿಡಿದುಕೊಂಡು ವಾಕಿಂಗ್ ಮಾಡುತ್ತಿದ್ದರು. ಹಾಗಾಗಿ ವಾಕಿಂಗ್ ಮಾಡುವಾಗಲೇ ಪುನೀತ್ ಗೆ ಎದೆನೋವು ಕಾಣಿಸಿಕೊಂಡಿತ್ತು ಎಂದು ಶೀರ್ಷಿಕೆ ನೀಡಿ ಜನ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಈ ಫೋಟೋ ಅಸಲಿ ಸತ್ಯವೇ ಬೇರೆಯಾಗಿದೆ. ಏನದು ಅಂತೀರಾ? ಮುಂದೆ ಓದಿ
ಅಸಲಿಗೆ ಅದು ಎರಡು ತಿಂಗಳ ಹಳೆಯ ಫೋಟೋ, ಎರಡು ತಿಂಗಳ ಹಿಂದೆ ಪುನೀತ್ ವಾಕಿಂಗ್ ಮಾಡುತ್ತಿದ್ದಾಗ ಈ ಫೋಟೋವನ್ನು ಸದಾಶಿವನಗರದ ಸ್ನೇಹಜೀವಿ ಗ್ರೂಪ್ ಸದಸ್ಯರು ತೆಗೆದಿದ್ದರು. ವಾಕಿಂಗ್ ಮಾಡುತ್ತಿರುವ ಅಪ್ಪು ಅವರಿಗೆ ಮುಂದುಗಡೆಯಲ್ಲಿದ್ದ ವ್ಯಕ್ತಿಯೊಬ್ಬರು ನಮಸ್ಕರಿಸಿದ್ದರು. ಅಪ್ಪು ಪ್ರತಿಯಾಗಿ ನಮಸ್ಕರಿಸುವ ಸಂದರ್ಭದಲ್ಲೇ ಫೋಟೋ ಕ್ಲಿಕ್ಕಿಸಲಾಗಿತ್ತು. ಕೈ ಎದೆ ಹತ್ತಿರ ಹೋಗಿದ್ದ ಕಾರಣ ಜನರು ಈ ಫೋಟೋವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
