fbpx
ಸಮಾಚಾರ

ಏಕ್ ಲವ್ ಯಾ ಚಿತ್ರತಂಡದಿಂದ ಅಪ್ಪು ಫೋಟೋಗೆ ಅವಮಾನ: ಬೇಷರತ್ ಕ್ಷಮೆಯಾಚಿಸಿದ ನಿರ್ದೇಶಕ ಪ್ರೇಮ್

ಅಪ್ಪು ಫೋಟೋಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪುನೀತ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ‘ಏಕಲವ್ಯ’ ಚಿತ್ರದ ನಿರ್ದೇಶಕ ಪ್ರೇಮ್ ಅವರ ಬೇಷರತ್ ಕ್ಷಮೆ ಕೇಳಿದ್ದಾರೆ. ಈ ವಿವಾದದ ಬಗ್ಗೆ ಸಾಮಾಜಿಕ ಜಾಲತಾಣದ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಪ್ರೇಮ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

“ಅಪ್ಪು ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನಸ್ಸಿನಲ್ಲಿದೆ, ಆ ಕಾರಣಕ್ಕೆ 4ರಂದು ಬಿಡುಗಡೆಯಾಗಬೇಕಿದ್ದ ಹಾಡನ್ನು 12ಕ್ಕೆ ಮಾಡಲಾಯಿತು, ಸಮಾರಂಭದ ಉದ್ಘಾಟನೆಯೇ ಅಪ್ಪು ಅವರನ್ನು ನೆನೆಯುತ್ತಾ, ಅವರ ವ್ಯಕ್ತಿತ್ವ ಹಾಗು ಅವರ ಜೊತೆ ಕಳೆದ ಕ್ಷಣಗಳನ್ನು ಸೆನೆಯುತ್ತಾ ಶುರುವಾಯಿತು.”

“ಈ ಹಾಡು ಶುರುವಾಗುವುದೇ ಅಪ್ಪು ಅಮರ ಎಂದು ಗೌರವ ಸಲ್ಲಿಸುತ್ತಾ. ಅಪ್ಪು ಅವರ ಫೋಟೋ ಮುಂದೆ ಶಾಂಪೇನ್‌ ಓಪನ್‌ ಮಾಡಿದ ಉದ್ದೇಶ ಕೇವಲ ಹಾಡಿನ ಬಿಡುಗಡೆಯ ಅಂಗವಾಗಿತ್ತು ಅದು ಅಷ್ಟಕ್ಕೇ ಸೀಮಿತ, ಇದರಿಂದ ಅಪ್ಪು ಅವರ ಅಭಿಮಾನಿಗಳಿಗೆ ನೋವಾಗಿದ್ದಲ್ಲಿ ನನ್ನ ಹಾಗೂ ನನ್ನ ಇಡೀ ಏಕ್‌’ಲವ್‌’ಯಾ ಚಿತ್ರತಂಡದ. ಕಡೆಯಿಂದ ಕ್ಷಮೆಯಾಚಿಸುತ್ತೇವೆ.” ಎಂದು ಪ್ರೇಮ್ ಟ್ವಿಟ್ಟರ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಏನಿದು ಘಟನೆ?
ರಕ್ಷಿತಾ ಪ್ರೇಮ್​ ಸಹೋದರ ರಾಣ ಅವರು ‘ಏಕ್​ ಲವ್​ ಯಾ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಪ್ರೇಮ್​ ಅವರು ‘ಏಕ್​ ಲವ್​ ಯಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಣ ನಟಿಸುತ್ತಿರುವ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್​ ನಾಯಕಿಯರು. ನೆನ್ನೆ (ನವೆಂಬರ್ 12) ಈ ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮ ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗಷ್ಟೆ ನಿಧನರಾದ ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನಮನವನ್ನು ಚಿತ್ರತಂಡ ಸಲ್ಲಿಸಿತು. ಅಷ್ಟಕ್ಕೇ ನಿಲ್ಲಿಸಿ ಕಾರ್ಯಕ್ರಮ ಮುಗಿಸಿದ್ದರೆ ವಿವಾದವಾಗುತ್ತಿರಲಿಲ್ಲ. ನಂತರ ಪುನೀತ್ ಭಾವಚಿತ್ರವಿರುವ ವೇದಿಕೆಯಲ್ಲಿಯೇ ಚಿತ್ರತಂಡ ಶಾಂಪೇನ್ ನ್ನು ಬಾಟಲ್ ಗೆ ಸುರಿದು ಸಂಭ್ರಮಾಚರಣೆ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಇನ್ನೂ 15 ದಿನಗಳಾಗಿಲ್ಲ, ಅವರ ಕುಟುಂಬಸ್ಥರು, ಅಭಿಮಾನಿಗಳು ತೀವ್ರ ದುಃಖದಲ್ಲಿದ್ದಾರೆ. ಹೀಗಿರುವಾಗ ಪರಮಾತ್ಮನ ಫೋಟೋ ಎದುರು ಶಾಂಪೇನ್ ಸುರಿದು ಚಿಯರ್ಸ್ ಎಂದು ಸಂಭ್ರಮಿಸುವ ಅಗತ್ಯವೇನಿತ್ತು ಇದು ನಟನಿಗೆ ಮಾಡಿರುವ ಅವಮಾನ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top