fbpx
ಸಮಾಚಾರ

ನವೆಂಬರ್ 15: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 15, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಏಕಾದಶೀ 6:39 am
ನಕ್ಷತ್ರ : ಉತ್ತರಾ ಭಾದ್ರ 6:09 pm
ಯೋಗ : ವಜ್ರ 1:35 am
ಕರಣ : ವಿಷ್ಟಿ 6:39 am ಬಾವ 7:16 pm

Time to be Avoided
ರಾಹುಕಾಲ : 7:47 am – 9:13 am
ಯಮಗಂಡ : 10:38 am – 12:04 pm
ದುರ್ಮುಹುರ್ತ : 12:26 pm – 1:12 pm, 2:43 pm – 3:29 pm
ವಿಷ : Nil
ಗುಳಿಕ : 1:29 pm – 2:55 pm

Good Time to be Used
ಅಮೃತಕಾಲ : 1:01 pm – 2:44 pm
ಅಭಿಜಿತ್ : 11:41 am – 12:26 pm

Other Data
ಸೂರ್ಯೋದಯ : 6:18 am
ಸುರ್ಯಾಸ್ತಮಯ : 5:50 pm
ರವಿರಾಶಿ : ತುಲ
ಚಂದ್ರರಾಶಿ : ಮೀನ

 

 

 

 

ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು.

 

ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ.

 

ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

 

ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.

 

 

ಉಸಿರು ಕಟ್ಟಿಸುವ ವಾತಾವರಣ ಇರುತ್ತದೆ. ಕುಲದೇವರ ಪ್ರಾರ್ಥನೆಯೊಂದಿಗೆ ಮನೆಯಿಂದ ಹೊರಡಿ. ಸಹೋದ್ಯೋಗಿಗಳೊಡನೆ ಅನಗತ್ಯ ಚರ್ಚೆ ಬೇಡ. ಕುಲದೇವರನ್ನು ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಆಗುವುದಿಲ್ಲ.

 

 

ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿಯ ಮತ್ತು ಸಂತೋಷದ ದಿನಗಳನ್ನು ಕಾಣುವಿರಿ. ನಿಮ್ಮ ಮೇಲೆ ಇದ್ದ ಅಪವಾದಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಆಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

 

 

ಎಲ್ಲದಕ್ಕೂ ಕೋಲೆ ಬಸವನಂತೆ ಒಪ್ಪಿಗೆ ಸೂಚಿಸದಿರಿ. ನನ್ನಿಂದ ಈ ಕೆಲಸ ಆಗುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ತಿಳಿಸಿ. ಇಲ್ಲದೆ ಇದ್ದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾಗುವುದು.

 

ಮಾತಿನ ಭರದಲ್ಲಿ ಆಡಿದ ಒಂದು ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಹಾಗಾಗಿ ಅದನ್ನು ಅನ್ಯರು ಗುರುತಿಸುವುದಕ್ಕಿಂತ ಮುಂಚೆಯೆ ತಿದ್ದಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಗೌರವ ಹೆಚ್ಚಾಗುವುದು.

 

 

ಹೃದಯ ವೈಶಾಲ್ಯತೆ ಇರುವ ಮನುಜನಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ಈ ಹಿಂದೆ ಆಗದೆ ಇದ್ದ ಕೆಲಸವು ದೈವಾನುಕೂಲತೆಯಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಸದಾ ಚಿಂತೆಯಲ್ಲಿದ್ದು ಎಲ್ಲಾ ಕಳೆದುಕೊಂಡ ಭಾವ ಬೇಡ. ಧೈರ್ಯವಾಗಿ ಮುನ್ನುಗ್ಗಿ ಕಾರ‍್ಯ ಸಾಧಿಸಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ನೀವಾಡುವ ಮಾತಿನಿಂದ ವಿರಸ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆಯಿಂದಿರಿ.

 

ಯಾವುದೇ ಕಾರಣಕ್ಕೂ ಬೇರೊಬ್ಬರ ಜತೆಯಲ್ಲಿ ವಾಗ್ವಾದ ಮಾಡುವುದಕ್ಕೆ ಹೋಗಬೇಡಿ ಅದು ನಿಮಗೆ ಅಷ್ಟು ಶುಭವಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಸಹೋದರರೊಂದಿಗೆ ವೈಮನಸ್ಸು ಬೆಳೆಯಲು ಕಾರಣವಾಗುವುದು. ಅದನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top