fbpx
ಸಮಾಚಾರ

ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ಅಜ್ಜಿ: ಇಲ್ಲಿದೆ ವೃದ್ಧೆಯ ಸ್ಫೂರ್ತಿದಾಯಕ ಕಥೆ

ಕಲಿಕೆಗೆ ವಯಸ್ಸಿನ ಅಡ್ಡಿ ಎಂದೂ ಆಗದ ಎಂಬ ಸಂದೇಶವನ್ನು ಕೇರಳದ 104 ವರ್ಷದ ವಯೋವೃದ್ಧೆಯೊಬ್ಬರು ದೇಶಕ್ಕೆ ಸಾರಿದ್ದಾರೆ. ಹೌದು, ಕೊಟ್ಟಾಯಂನ ಅಯರ್ಕುನ್ನಂ ಪಂಚಾಯತ್‍ನಲ್ಲಿ ‘ಸಾಕ್ಷರತಾ’ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಗೆ 104 ವರ್ಷದ ಕುಟ್ಟಿಯಮ್ಮ ಅವರು ಹಾಜರಾಗಿ ಪರೀಕ್ಷೆ ಬರೆದು 100 ಅಂಕಗಳಿಗೆ 89 ಅಂಕಗಳನ್ನು ಗಳಿಸಿದ್ದಾರೆ.

ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‌ ಕುಟ್ಟಿ ಅವರು 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ರಾಜ್ಯ ಸರ್ಕಾರದ ನಿರಂತರ ಕಲಿಕೆ ಅಭಿಯಾನದಡಿ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕುಟ್ಟಿಯಮ್ಮ ಅವರಿಗೆ ಶುಭ ಹಾರೈಸಿದ್ದಾರೆ.

 

 

“ಕೇರಳ ರಾಜ್ಯ ಸಾಕ್ಷರತೆ ಪರೀಕ್ಷೆಯಲ್ಲಿ ಕೊಟ್ಟಾಯಂನ 104 ವರ್ಷ ವಯಸ್ಸಿನ ಕುಟ್ಟಿಯಮ್ಮ 100ಕ್ಕೆ 89 ಅಂಕ ಪಡೆದಿದ್ದಾರೆ. ಜ್ಞಾನದ ಜಗತ್ತು ಪ್ರವೇಶಿಸಲು ವಯಸ್ಸು ತಡೆಯಾಗದು. ಅತ್ಯಂತ ಗೌರವ ಹಾಗೂ ಪ್ರೀತಿಯಿಂದ ನಾನು ಕುಟ್ಟಿಯಮ್ಮ ಮತ್ತು ಇತರ ಎಲ್ಲ ಹೊಸ ಕಲಿಕಾರ್ಥಿಗಳಿಗೆ ಶುಭ ಹಾರೈಸುತ್ತಿದ್ದೇನೆ” ಎಂಬ ಶೀರ್ಷಿಕೆಯೊಂದಿಗೆ ಕುಟ್ಟಿಯಮ್ಮ ಅವರ ಚಿತ್ರವನ್ನು ಶೇರ್ ಮಾಡಿದ್ದಾರೆ.

ಕುಟ್ಟಿಯಮ್ಮ ಅವರು ತಮ್ಮ ಬಾಲ್ಯದಲ್ಲಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಆದರೆ, ತಾವು ಕೂಡ ಎಲ್ಲರಂತೆ ಓದಬೇಕು ಮತ್ತು ಬರೆಯಯಬೇಕು ಎಂಬ ಆಸೆ ಕುಟ್ಟಿಯಮ್ಮ ಅವರಲ್ಲಿ ಮೊದಲಿನಿಂದಲೂ ಇತ್ತು. ಇದೆ ಹೊತ್ತಿಗೆ ಸಾಕ್ಷರತಾ ಪ್ರೇರಕ ರೆಹನಾ ಕಾರ್ಯಕ್ರಮ ಕುಟ್ಟಿಯಮ್ಮ ಅವರಿಗೆ ವರವಾಗಿ ಬಂತು. ಕಾರ್ಯಕ್ರಮದ ಮೂಲಕ ಬರೆಯುವುದನ್ನು ಕಲಿತರು.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಮ್ಮ ಮನೆಯಲ್ಲಿಯೇ ತರಗತಿಗೆ ಹಾಜರಾಗುತ್ತಿದ್ದರು. ತರಗತಿಗಳಿಗೆ ಹಾಜರಾದ ನಂತರ ಕುಟ್ಟಿಯಮ್ಮ ನಾಲ್ಕನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದರು. 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸುವುದಿಲ್ಲ, ಆದ್ದರಿಂದ ಅವರು ಪರೀಕ್ಷೆ ವೇಳೆ ಗಟ್ಟಿಯಾಗಿ ಮಾತನಾಡುವಂತೆ ಪರೀಕ್ಷಾ ಮೇಲ್ವಿಚಾರಕ ಗಳಲ್ಲಿ ಮನವಿ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top