ಈ ಶಾಲಾ ಕಟ್ಟಡದ ಮೇಲೆಲ್ಲಾ ವರ್ಣಮಯ ಚಿತ್ತಾರ. ತರಗತಿಯ ಒಳಹೊಕ್ಕರೆ ಅಲ್ಲೊಂದು ಸ್ಮಾರ್ಟ್ ಪರದೆ ಅಳವಡಿಸಿರುವ ರಂಗಮಂದಿರ. ಇದು ಸ್ಮಾರ್ಟ್ ಸೌಲಭ್ಯಗಳೊಂದಿಗೆ ನವೀಕೃತಗೊಂಡಿರುವ ಬೆಂಗಳೂರಿನ ಹೆಬ್ಬಾಳದಲ್ಲಿನ ಸರ್ಕಾರಿ ಮಾದರಿ ಶಾಲೆಯ ಈಗಿನ ನೋಟ. ಇದಕ್ಕೆ ಕಾರಣರಾದವರು ಸಂಸದರಾದ ಜಿಸಿ ಚಂದ್ರಶೇಖರ್ ಅವರು.
ಹೌದು, ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ಮತ್ತೊಂದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. #SaveGovernmentSchool #ಸರ್ಕಾರಿ_ಶಾಲೆ_ಉಳಿಸಿ ಹಾಗು #GirlsPride ಅಭಿಯಾನಗಳನ್ನು ಆರಂಭಿಸಿ ಅದರ ಅಡಿಯಲ್ಲಿ ಈ ಹಿಂದೆ ಬೆಂಗಳೂರಿನ ದಾಸರಹಳ್ಳಿ, ಬ್ಯಾಡರಹಳ್ಳಿ ಮತ್ತು ಶಿವಾಜಿ ನಗರಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಚಂದ್ರಶೇಖರ್ ಅಭಿವೃದ್ಧಿಪಡಿಸಿದ್ದರು. ಇದೀಗ ಹೆಬ್ಬಾಳದಲ್ಲಿರುವ ಸರ್ಕಾರಿ ಶಾಲೆಗೆ ನೂತನ ತಂತ್ರಜ್ಞಾನಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.
ನನ್ನ ಸರ್ಕಾರಿ ಶಾಲೆ ಉಳಿಸಿ #SaveGovernmentSchool ಮತ್ತು ಹೆಣ್ಣುಮಕ್ಕಳ ಹೆಮ್ಮೆ #GirlsPride ಅಭಿಯಾನದ ಅಡಿಯಲ್ಲಿ ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು , ಕಲಿಕಾ ಪೂರಕ ವಾತಾವರಣವನ್ನು ನಮ್ಮ ಸರ್ಕಾರಿ ಶಾಲೆಗಳಲ್ಲಿ ಸೃಷ್ಟಿಸುವ ಕನಸಿನೊಂದಿಗೆ ಇನ್ನೊಂದು ಹೆಜ್ಜೆ ಮುಂದಿಟ್ಟಿದಿವಿ ನಿಮ್ಮ ಬೆಂಬಲ,ಆಶೀರ್ವಾದ , ಸಲಹೆ , ಸೂಚನೆ ಸದಾ ಇರಲಿ. pic.twitter.com/Fn4txzB8rc
— GC ChandraShekhar (@GCC_MP) January 29, 2021
ಜಿಸಿ ಚಂದ್ರಶೇಖರ್ ತಮ್ಮ ಸಂಸದರ ನಿಧಿಯಿಂದ ಹೆಬ್ಬಾಳದಲ್ಲಿ ಇರುವ ಸರ್ಕಾರಿ ಶಾಲೆಯನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಉತ್ತಮಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡು ಉದ್ಘಾಟಿಸಿದ್ದಾರೆ. ಅವರು ಈ ಶಾಲೆಯ ಎರಡು ಕೊಠಡಿಗಳ ಕಟ್ಟಡ ನಿರ್ಮಿಸಿ, ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇಲ್ಲಿ ಯಾವುದೇ ಕಾನ್ವೆಂಟ್‍ಗೂ ಕಡಿಮೆ ಇಲ್ಲವೆಂಬಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಿಸಲಾಗಿದೆ. ಇನ್ನು ಮಕ್ಕಳಿಗೆ ಅತ್ಯಾಧುನಿಕ ಡೆಸ್ಕ್, ಛೇರ್, ಸ್ಮಾರ್ಟ್ ಬೋರ್ಡ್ ಒದಗಿಸಲಾಗಿದೆ.
ಹಾಗೆಯೆ ಹೆಣ್ಣುಮಕ್ಕಳ ಶುಚಿತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ #ಹೆಣ್ಣುಮಕ್ಕಳಹೆಮ್ಮೆ #girlspride ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಶೌಚಾಲಯ ದುರಸ್ತಿ ಹಾಗೂ ನವೀಕರಣ, ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್, ನೀರಿನ ಸೌಕರ್ಯ ಕೊಳವೆಗಳ ದುರಸ್ತಿ ಮಾಡಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
