fbpx
ಸಮಾಚಾರ

ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಎಬಿಡಿ ವಿಲಿಯರ್ಸ್

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ ಎಬಿ ಡಿ ವಿಲಿಯರ್ಸ್2018 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಹಾಗಿದ್ದರೂ ಐಪಿಎಲ್, ಪಿಎಸ್ಎಲ್ ಸೇರಿ ಕೆಲವು ದೇಶೀ ಟೂರ್ನಿಮೆಂಟ್ ಗಳಲ್ಲಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದ್ದರು. ಈಗ ಎಬಿಡಿ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದನ್ನು ನೀಡಿದ್ದು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಸಂಪೂರ್ಣವಾಗಿ ಎಬಿ ಹಿಂದೆ ಸರಿದಿದ್ದಾರೆ.

 

 

ಈ ಬಗ್ಗೆ ಸ್ವತಃ ಎಬಿಡಿ ವಿಲಿಯರ್ಸ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದು ಅಭಿಮಾನಿಗಳಿಗೆ, ಸಹ ಆಟಗಾರರಿಗೆ, ಕೋಚ್ ಗಳಿಗೆ ಧನ್ಯವಾದ ತಿಳಿಸಿದ್ದಾರೆ. “ಇದು ಮರೆಯಲಾಗದಂತ ಪಯಣ. ಆದರೆ ನಾನು ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಮನೆಯಂಗಳದಲ್ಲಿ ನಮ್ಮ ಅನ್ನದಿರ ಜೊತೆ ಆಡಲು ಶುರು ಮಾಡಿದಾಗಿನಿಂದ ನಾನು ಕ್ರಿಕೆಟ್ ಅನ್ನು ತುಂಬಾ ಆನಂದಿಸುತ್ತಾ ಉತ್ಸಾಹದಿಂದ ಆಡಿದ್ದೇನೇ. ಆದರೆ ಈಗ, 37 ನೇ ವಯಸ್ಸಿನಲ್ಲಿ, ಆ ಉತ್ಸಾಹದ ಜ್ವಾಲೆ ಪ್ರಕಾಶಮಾನವಾಗಿ ಉರಿಯುವುದಿಲ್ಲ. ಅದು ನಾನು ಒಪ್ಪಿಕೊಳ್ಳಲೇಬೇಕಾದ ವಾಸ್ತವ – ಮತ್ತು, ಈ ನಿರ್ಧಾರ ಹಠಾತ್ತಾಗಿ ಕಾಣಬಹುದು ಆದರೂ ನಾನು ಇಂದು ಈ ಘೋಷಣೆ ಮಾಡುತ್ತಿದ್ದೇನೆ. ” ಎಂದು ಎಬಿ ಡಿ ವಿಲಿಯರ್ಸ್ ಬರೆದುಕೊಂಡಿದ್ದಾರೆ.

 
ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟಾನ್ಸ್, ಅಥವಾ ಪ್ರೋಟೀಸ್, ಅಥವಾ ಆರ್ ಸಿಬಿ, ಅಥವಾ ಪ್ರಪಂಚದಾದ್ಯಂತ ಆಡುತ್ತಿರಲಿ, ಆಟವು ನನಗೆ ಊಹಿಸಲಾಗದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ, ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಅದೇ ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ ಎಂದು ” ಎಂದು ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್ ಹಿಂದಿ ಭಾಷೆಯಲ್ಲೂ ಧನ್ಯವಾದ ಎಂದು ಬರೆದಿದ್ದಾರೆ.
 

2011 ರಲ್ಲಿ ಆರ್ ಸಿಬಿ ಪರವಾಗಿ ILP ವೃತ್ತಿಜೀವನವನ್ನು ಪ್ರಾರಂಭಿಸಿದ ಎಬಿ ಡಿ ವಿಲಿಯರ್ಸ್ 10 ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರವಾಗಿ ಆಟವಾಡಿದ್ದಾರೆ. ಐಪಿಎಲ್​ನಲ್ಲಿ ಇವರು 184 ಪಂದ್ಯಗಳನ್ನು ಆಡಿದ್ದು 5162 ರನ್ ಬಾರಿಸಿದ್ದಾರೆ. ಒಟ್ಟು ಮೂರು ಶತಕ ಮತ್ತು 40 ಅರ್ಧಶತಕ ಕೂಡ ಸಿಡಿಸಿದ್ದಾರೆ. 251 ಸಿಕ್ಸರ್, 413 ಬೌಂಡರಿ ಬಾರಿಸಿದ ಸಾಧನೆ ಇವರದ್ದು.

37ರ ಹರೆಯದ ಎಬಿಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಸುಮಾರು 17 ವರ್ಷಗಳ ಕಾಲ ವೃತ್ತಿ ಬದುಕನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದಿರುವ ಸ್ಫೋಟಕ ಬ್ಯಾ ಡಿವಿಲಿಯರ್ಸ್, ನಿವೃತ್ತಿ ನೀಡಲು ಇದು ಸಕಾಲ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top