fbpx
ಸಮಾಚಾರ

ನವೆಂಬರ್ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 22, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ 10:26 pm
ನಕ್ಷತ್ರ : ಮೃಗಶಿರ 10:43 am
ಯೋಗ : ಸಾಧ್ಯ Full Night
ಕರಣ : ವಾಣಿಜ 9:07 am ವಿಷ್ಟಿ 10:26 pm

Time to be Avoided
ರಾಹುಕಾಲ : 7:50 am – 9:15 am
ಯಮಗಂಡ : 10:40 am – 12:05 pm
ದುರ್ಮುಹುರ್ತ : 12:28 pm – 1:13 pm, 2:44 pm – 3:30 pm
ವಿಷ : 8:11 pm – 9:59 pm
ಗುಳಿಕ : 1:30 pm – 2:56 pm

Good Time to be Used
ಅಮೃತಕಾಲ : 2:29 am – 4:17 am
ಅಭಿಜಿತ್ : 11:43 am – 12:28 pm

Other Data
ಸೂರ್ಯೋದಯ : 6:21 am
ಸುರ್ಯಾಸ್ತಮಯ : 5:50 pm
ರವಿರಾಶಿ : ವೃಶ್ಚಿಕ
ಚಂದ್ರರಾಶಿ : ಮಿಥುನ

 

 

 

 

ನೂತನ ಮಿತ್ರರು ಸೇರ್ಪಡೆ ಆಗುವರು. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ. ಶಿವನ ಮಂತ್ರವನ್ನು ಪಠಿಸಿರಿ.

 

ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ಇಂದು ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿ ಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು.

 

ಕಾಡಿನ ಸಿಂಹವು ಹಸಿದು ಇದ್ದರೂ ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷ ಮೆ ಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.

 

ಕೆಲಸದ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಆದರೆ ಅದಕ್ಕಾಗಿ ಹೆಚ್ಚು ಚಿಂತಿಸಬೇಕಿಲ್ಲ. ಆದ್ಯತೆಯ ಮೇರೆಗೆ ಮೊದಲು ಬಂದ ಕೆಲಸವನ್ನು ಮೊದಲು ಮುಗಿಸಿ. ಕಾರ್ಯದ ವೇಳಾಪಟ್ಟಿ ಇರಲಿ.

 

 

ಎದುರಾಳಿಗಳನ್ನು ಎದುರಿಸುವ ಕಲೆ ನಿಮಗೆ ಕರಗತವಾಗಿರುವುದು. ಅಂತೆಯೇ ಅವರ ಮನಸ್ಥಿತಿಯನ್ನು ಅರಿತು ಅವರ ಸ್ನೇಹವನ್ನು ಬಯಸುವಿರಿ. ಆದರೆ ಶತ್ರು, ಶತ್ರುವೇ ಮಿತ್ರನಲ್ಲ. ಆತನನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.

 

 

ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

 

 

ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ.

 

 

ಇಂದು ನಿಮ್ಮ ಮನಸ್ಸು ನಿರಾಳವಾಗಿರುವುದು. ಅಲ್ಲದೆ ಮನಸ್ಸಿನ ತಾಕಲಾಟಗಳಿಗೆ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ.

 

ನಯವಾದ ಮಾತುಗಳನ್ನು ನಂಬಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವಿರಿ. ಆದಷ್ಟು ಜಾಗ್ರತೆಯಿಂದ ಇರಿ. ಅಕಾಲದಲ್ಲಿ ಸೇವಿಸಿದ ಆಹಾರದ ವ್ಯತ್ಯಯದಿಂದ ಉದರಶೂಲೆಯನ್ನು ಅನುಭವಿಸುವಿರಿ.

 

 

ಅನಗತ್ಯ ಕೆಲಸ ಮಾಡಲು ಮುಂದಾಗುವಿರಿ. ಇಲ್ಲವೇ ಮಾಡುವ ಕೆಲಸದಲ್ಲಿ ಉದಾಸೀನ ತೋರುವಿರಿ. ಪ್ರಯಾಣದಲ್ಲಿ ಎಚ್ಚರ. ಗುರುರೂಪದ ಹಿರಿಯರೊಬ್ಬರ ಆಶೀರ್ವಾದವನ್ನು ಇಂದು ನೀವು ಪಡೆಯುವಿರಿ.

 

ಸಂಪಾದನೆಗಿಂತ ಹೆಚ್ಚು ಖರ್ಚಾಗುವುದು. ನೆರೆಹೊರೆಯವರ ವ್ಯಾಜ್ಯವನ್ನು ಬಗೆಹರಿಸಲು ಹೋಗಿ ಅವಮಾನಿತರಾಗುವಿರಿ.  ಹಣಕಾಸಿನ ವಿಷಯದಲ್ಲಿ ಮನಸ್ತಾಪವನ್ನುಂಟು ಮಾಡಿಸುವರು. ಆಂಜನೇಯ ಸ್ತೋತ್ರ ಪಠಿಸಿರಿ.

 

ನೂತನ ಜನರ ಪರಿಚಯವಾಗುವುದು. ಅಂತೆಯೇ ನಿಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯು ವಿಸ್ತಾರಗೊಳ್ಳುತ್ತಿರುವುದು. ಎಲ್ಲರನ್ನೂ ಎಲ್ಲ ಕಾಲಕ್ಕೂ ಸಂತೋಷಪಡಿಸಲು ಆಗುವುದಿಲ್ಲ. ಹಾಗಾಗಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳುವುದು ಅನಿವಾರ್ಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top