fbpx
ಸಮಾಚಾರ

ಮೊದಲ ಬಾರಿಗೆ ಮುದ್ದು ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ ಶ್ರೇಯಾ ಘೋಷಾಲ್: ವಿಶೇಷ ಹೆಸರಿಟ್ಟಿರುವ ಗಾನಕೋಗಿಲೆ

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇದೇ ಮೊದಲ ಬಾರಿಗೆ ತಮ್ಮ ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಹೌದು, ಸದ್ಯ ಆರು ತಿಂಗಳ ಮಗುವಾಗಿರುವ ಶ್ರೇಯಾರ ಪುತ್ರ ‘ದೇವ್ ಯಾನ್’ ಫೋಟೋವನ್ನು ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಗಾಯಕಿ ಹಂಚಿಕೊಂಡಿದ್ದಾರೆ.

 

 

ದೇವ್‍ಯಾನ್‍ಗೆ 5 ತಿಂಗಳು ತುಂಬಿದ್ದು 6ನೇ ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಹಿನ್ನೆಲೆ ಶ್ರೇಯಾ ಘೋಷಾಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಶ್ರೇಯಾ ದೇವ್‍ಯಾನ್ ತೋಳಿನಲ್ಲಿ ಎತ್ತಿಕೊಂಡಿದ್ದರೆ, ದೇವ್ಯಾನ್ ಕ್ಯೂಟ್ ಆಗಿ ಸ್ಮೈಲ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾನೆ.

ಎಲ್ಲರಿಗೂ ಹಾಯ್, ನಾನು ದೇವ್‍ಯಾನ್, ನನಗೀಗ 6 ತಿಂಗಳು. ಪ್ರಸ್ತುತ ನನ್ನ ಸುತ್ತಲಿರುವ ಪ್ರಪಂಚವನ್ನು ಅನ್ವೇಷಿಸುವಲ್ಲಿ ನಾನು ಬ್ಯುಸಿಯಾಗಿದ್ದೇನೆ. ನನ್ನ ನೆಚ್ಚಿನ ಹಾಡಗಳನ್ನು ಕೇಳುತ್ತಿದ್ದೇನೆ, ಎಲ್ಲಾ ರೀತಿಯ ಚಿತ್ರಗಳಿರುವ ಪುಸ್ತಕಗಳನ್ನು ಓದುತ್ತಿದ್ದೇನೆ. ಸಿಲ್ಲಿ ಜೋಕ್‍ಗಳಿಗೆ ಜೋರಾಗಿ ನಗುತ್ತಿರುತ್ತೇನೆ ಮತ್ತು ನನ್ನ ತಾಯಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಮಗನ ಪರವಾಗಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top