fbpx
ಸಮಾಚಾರ

ಪವಾಡ! ರಾತ್ರಿಯಿಡೀ ಶವಾಗಾರದ ಫ್ರೀಝರ್ ನಲ್ಲಿದ್ದ ‘ಮೃತ ವ್ಯಕ್ತಿ’ 7 ಗಂಟೆಗಳ ಬಳಿಕ ಜೀವಂತ: ಇಲ್ಲಿದೆ ಎದೆ ಝಲ್ ಎನಿಸುವ ವಿಡಿಯೋ!

ಕೆಲವೊಮ್ಮೆ ತುಂಬಾ ಅಪರೂಪವಾಗಿ ಸತ್ತಂತಹ ವ್ಯಕ್ತಿಗಳು ಮತ್ತೆ ಜೀವಂತವಾಗಿರುವ ಘಟನೆಗಳನ್ನು ನಾವು ಟಿವಿಯಲ್ಲಿ ನೋಡಿರುತ್ತೇವೆ ಅಥವಾ ಪತ್ರಿಕೆಗಳಲ್ಲಿ ಓದಿರುತ್ತೇವೆ. ಕೆಲವೊಂದು ಸಮಯದಲ್ಲಿ ಮೃತ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರಕ್ಕೆಂದು ತೆಗೆದುಕೊಂಡು ಹೋದಾಗ ಅಲ್ಲಿ ಕೆಲವರಿಗೆ ಜೀವ ಮರಳಿ ಬಂದಿರುವಂತಹ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಅಲ್ಲಿ ನೆರದ್ದಿದ್ದವರನ್ನು ಭಯಭೀತರನ್ನಾಗಿಸುವುದಲ್ಲದೆ, ಸತ್ತಂತಹ ವ್ಯಕ್ತಿ ಹೇಗೆ ಮತ್ತೆ ಜೀವಂತವಾಗಿದ್ದಾನೆ ಎಂದು ಆಶ್ಚರ್ಯವನ್ನು ಸಹ ಉಂಟು ಮಾಡಿರುತ್ತದೆ.

ಹೌದು, ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, 40 ವರ್ಷದ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿ, ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇರಿಸಿ ಇನ್ನೇನು ಮರಣೋತ್ತರ ಪರೀಕ್ಷೆ ಆರಂಭಿಸಬೇಕೆನ್ನುವಷ್ಟರಲ್ಲಿ ಆತ ಜೀವಂತವಾಗಿ ಕಂಡು ಬಂದಿರುವುದು ಕುತೂಹಲಕ್ಕೆ, ಅಚ್ಚರಿಗೆ ಕಾರಣವಾಗಿದೆ.

 

 

ಇದರ ವಿಡಿಯೋ ಇದೀಗ ವೈರಲ್‌ ಆಗಿದೆ. ಮೊರಾದಾಬಾದ್‌ನ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಂತಹ ಶ್ರೀಕೇಶ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪರೀಕ್ಷೆ ಮಾಡಿದದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು. ನಂತರ ಮುಂದಿನ ಪ್ರಕ್ರಿಯೆ ನಡೆಸುವ ಮುನ್ನ ಶವಾಗಾರದ ಫ್ರೀಜರ್‌ನಲ್ಲಿ ಇಡಲಾಗಿತ್ತು.

ಏಳು ಗಂಟೆಯ ಬಳಿಕ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕಿತ್ತು. ಆಗ ಸ್ಥಳಕ್ಕೆ ಅವರ ಕುಟುಂಬದರು ಮತ್ತು ಪೊಲೀಸರು ಬಂದಿದ್ದಾರೆ. ಮೃತದೇಹವನ್ನು ನೀಡುವ ಸಮಯದಲ್ಲಿ ಶ್ರೀಕೇಶ್ ಕುಮಾರ್ ಅವರ ಅತ್ತಿಗೆ ಮಧುಬಾಲಾ ಅವರ ದೇಹ ಚಲಿಸುತ್ತಿರುವುದನ್ನು ಗಮನಿಸಿ ಕುಟುಂಬಸ್ಥರಿಗೆ ಹೇಳಿದ್ದಾರೆ. ನಂತರ ವೈದ್ಯರಿಗೂ ತಿಳಿಸಿದ್ದಾರೆ.

ಶ್ರೀಕೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಇನ್ನೂ ಕೋಮಾದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಕೇಶನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದು ಪವಾಡವಲ್ಲದೆ ಬೇರೇನೂ ಅಲ್ಲ. ಆದರೆ ಬದುಕಿದ್ದಾಗಲೂ ವೈದ್ಯರು ಹೇಗೆ ಸತ್ತರು ಎಂದು ಘೋಷಿಸಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಡಿಯೋ ವೈರಲ್​!
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಧುಬಾಲಾ “ಅವನು ಸತ್ತಿಲ್ಲ. ಇದು ಹೇಗೆ ಸಂಭವಿಸಿತು ನಮಗೆ ಗೊತ್ತಾಗುತ್ತಿಲ್ಲ, ನೋಡಿ ಅವನು ಏನನ್ನೋ ಹೇಳಲು ಬಯಸುತ್ತಿದ್ದಾನೆ, ಅವನು ಇನ್ನೂ ಉಸಿರಾಡುತ್ತಿದ್ದಾನೆ” ಎಂದು ಹೇಳಿರುವುದನ್ನು ನಾವು ನೋಡಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top