fbpx
ಸಮಾಚಾರ

KMC ನೇಮಕಾತಿ: 60 ಹುದ್ದೆಗಳಿಗೆ ಅರ್ಜಿ ಅಹ್ವಾನ.

ಕೊಲ್ಕತ್ತಾ ಮುನ್ಸಿಪಲ್​ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 60 ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು ಎಂಬಿಬಿಎಸ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನೇರ ಸಂದರ್ಶನ ಮಾಡಲಾಗುತ್ತದೆ ಸಂದರ್ಶನದ ದಿನಾಂಕ: 29/11/೨೦೨೧. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 62 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 24,000- 60,000 ದವರೆಗೆ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ:ವೈಯಕ್ತಿಕ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಕೊಠಡಿ ಸಂಖ್ಯೆ -254, 2ನೇ ಮಹಡಿ, ಪಿಎಂಯು
ಕೊಲ್ಕತ್ತಾ ಸಿಟಿ NHUM ಸೊಸೈಟಿ, 5, ಎಸ್​.ಎನ್​. ಬ್ಯಾನರ್ಜಿ ರಸ್ತೆ
ಕೊಲ್ಕತ್ತಾ- 700013.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top