fbpx
ಸಮಾಚಾರ

“ನಾನು ಶರ್ಟ್ ಗುಂಡಿ ಬಿಚ್ಚೋದು ಯಾಕೆ ಗೊತ್ತಾ?” ಶರ್ಟ್‌ಗೆ ಗುಂಡಿ ಯಾಕೆ ಹಾಕಲ್ಲ ಎಂದು ಗುಟ್ಟು ರಟ್ಟು ಮಾಡಿದ ರವಿಚಂದ್ರನ್

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣದಲ್ಲಿ ಅದ್ದೂರಿತನ ಪರಿಚಿಸಿದ ಕೆಲವೇ ಕೆಲವು ಚಿತ್ರತಯಾರಕರಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಸಿನಿಮಾಗಳಲ್ಲಿನ ಹಾಡು, ದ್ರಶ್ಯಗಳನ್ನ ತೆರೆ ಮೇಲೆ ಅಸಾಧ್ಯವೆನಿಸುವ ಹಾಗೆ ತೋರಿಸುತ್ತಿದ್ದ ಅದ್ದೂರಿತನಕ್ಕೆ ಅಭಿಮಾನಿಗಳು ಅವರನ್ನ ಪ್ರೀತಿಯಿಂದ ‘ಕ್ರೇಜಿಸ್ಟಾರ್’ ಎಂದು ಕರೆಯುತ್ತಾರೆ,. ಕ್ರೇಜಿಸ್ಟಾರ್ ತೆರೆ ಏನೇ ಮಾಡಿದ್ರೂ ಕ್ರೇಜಿಯಾಗಿಯೇ ಇರುತ್ತದೆ.

ಕೇವಲ ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ರವಿಮಾಮ ತಮ್ಮದೇ ಶೈಲಿಯಲ್ಲಿ ಬದುಕುತ್ತಾರೆ. ಸಾರ್ವಜನಿಕವಾಗಿ ಎಲ್ಲೇ ಕಾಣಿಸಿದರೂ ರವಿಚಂದ್ರನ್ ಕಪ್ಪು ಬಣ್ಣದ ಉಡುಪಿನಲ್ಲಿ ಇರುವುದೇ ಹೆಚ್ಚು. ಅಂತೆಯೇ ತಲೆ ಮೇಲೊಂದು ಕಪ್ಪು ಬಣ್ಣದ ವಿಭಿನ್ನ ಟೋಪಿ, ಮಡಿಚಿದ ತೋಳು ಇದು ರವಿಚಂದ್ರನ್ ಅವರ ಸರಳ ಮತ್ತು ವಿಭಿನ್ನ ಸ್ಟೈಲ್.

ನೀವು ಗಮನಿಸಿರಬಹುದು, ಸಿನಿಮಾ ಹೊರತಾಗಿ ಸಾರ್ವಜನಿಕವಾಗಿ ಎಲ್ಲಿಯೇ ಕಾಣಿಸಿದರು, ಯಾವುದೇ ಸಿನಿಮಾ ಸಮಾರಂಭವಾಗಲಿ, ಮುಹೂರ್ತವಾಗಲಿ, ಸಂದರ್ಶನವಾಗಲಿ ರವಿ ಚಂದ್ರನ್ ಅವರು ತಮ್ಮ ಶರ್ಟ್ ನ ಮೇಲ್ಭಾಗದ ಮೂರ್ನಾಲ್ಕು ಗುಂಡಿಗಳನ್ನ ಹಾಕಿರುವುದೇ ಇಲ್ಲ.. ರವಿ ಸರ್ ಯಾಕೆ ಹೀಗೆ ಶರ್ಟ್ ಬಟನ್ ಗಳನ್ನ ಹಾಕದೆ ತಮ್ಮ ಎದೆಯನ್ನು ತೋರಿಸಿಕೊಂಡು ಓಡಾಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ಈ ಪ್ರಶ್ನೆಗೆ ಈಗ ಸ್ವತಃ ರವಿಚಂದ್ರನ್ ಅವರೇ ಉತ್ತರ ಕೊಟ್ಟಿದ್ದಾರೆ.

 

 

ಕಳೆದವಾರ ಬಿಡುಗಡೆಗೊಂಡ ಪುತ್ರನ ಚಿತ್ರ ‘ಮುಗಿಲ್ ಪೇಟೆ’ಯನ್ನು ರವಿಚಂದ್ರನ್ ವೀಕ್ಷಿಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದರು. “‘ಮುಗಿಲ್​ಪೇಟೆ’ಯಲ್ಲಿ ನನ್ನ ಮ್ಯೂಸಿಕ್​ ಬಳಸಿಕೊಂಡಿದ್ದಾರೆ ಪರವಾಗಿಲ್ಲ ನನ್ನ ಮಗ ಅಲ್ಲವಾ ಎಕ್ಸ್​​ಕ್ಯೂಸ್ ಕೊಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮಾತು ಮುಂದುವರೆಸಿದ ಅವರು ಮ್ಯೂಸಿಕ್​ ಜೊತೆ ನಾನು ಶರ್ಟ್​ ಬಿಚ್ಚಿವುದನ್ನು ಮನುರಂಜನ್​ ಮಾಡಿದ್ದಾರೆ ಎಂದರು. ಈ ವೇಳೆ ತಾವು ಯಾವಾಗಲು ಶರ್ಟ್ ಬಟನ್​​ ಬಿಚ್ಕೊಂಡಿರೋದ್ಯಾಕೆ ಎನ್ನುವ ಸಂಗತಿಯನ್ನು ಕೂಡ ಅವರು ಇಲ್ಲಿ ರಿವೀಲ್​​ ಮಾಡಿದ್ದಾರೆ.

” ಮೊದಲಿನಿಂದಲೂ ನನಗೆ ಕಂಫರ್ಟ್ ಇದು. ಯಾರಿಗೂ ತೋರಿಸಿಕೊಳ್ಳುವುದಕ್ಕೋ, ಇಲ್ಲಾ ಧಿಮಾಕಿಗೋ ಶರ್ಟ್ ಗುಂಡಿ ಬಿಚ್ಚಿಲ್ಲ. ಮೊದಲಿನಿಂದಲೂ ನಾನು ಇರುವುದೇ ಹೀಗೆ.. ಸೆಕ್ಸಿಯಾಗಿ ಕಾಣಬೇಕು ಅಂತಲ್ಲ. ಎದೆ ತೋರಿಸಿಕೊಂಡು ಓಡಾಡುವುದು ಯಾರಿಗೆ ಬರುತ್ತೆ? ಬಹುಶ: ಅದೇ ಧೈರ್ಯ ಇರಬೇಕು. ಮೊದಲಿನಿಂದಲೂ ಇದೇ ಧೈರ್ಯದ ಮೇಲೆ ಓಡಾಡಿಕೊಂಡಿದ್ದೆ. ಈಗ ನನ್ನ ಮಗ ಮನಸ್ಸಿನಿಂದ ನನ್ನ ಸ್ಟೈಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ನನಗೆ ಮೊದಲಿನಿಂದ ಶರ್ಟ್ ಕಾಲರ್ ಎತ್ತಿ ಓಡಾಡಿ ಆಭ್ಯಾಸ. ಶರ್ಟ್ ಕಾಲರ್ ಯಾವಾಗಲೂ ನಿಂತಿರಬೇಕು. ಅದಕ್ಕೆ ನಾನು ಮೊದಲಿನಿಂದ ಶರ್ಟ್‌ಗೆ ಗುಂಡಿ ಹಾಕುವುದಿಲ್ಲ.” ಎಂದಿದ್ದಾರೆ ರವಿಚಂದ್ರನ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top