fbpx
ಸಮಾಚಾರ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಪ್ರಿಯಾಂಕಾ-ನಿಕ್ ದಂಪತಿ? ತಾಯಿಯಾಗ್ತಿದ್ದಾರ ಪ್ರಿಯಾಂಕಾ ಚೋಪ್ರಾ?

ಪ್ರಿಯಾಂಕಾ ಹಾಗೂ ನಿಕ್ ವಿಚ್ಛೇದನದ ವದಂತಿಗಳು ಹಬ್ಬುತ್ತಿರುವ ಸಮಯದಲ್ಲಿಯೇ ಪ್ರಿಯಾಂಕಾ ಛೋಪ್ರಾ, ನನ್ನ ಹಾಗೂ ನಿಕ್ ನಡುವೆ ಎಲ್ಲವೂ ಸರಿ ಇದೆ ಅನ್ನೋದನ್ನ ಸೋಷಿಯಲ್ ಮೀಡಿಯಾದಲ್ಲಿ ಸಾಬೀತು ಮಾಡಿದ್ದಾರೆ.. ಇದರ ಜೊತೆಗೆ ನಿಕ್ ಹಾಗೂ ನಾನು ಶೀಘ್ರವೇ ಮಗು ಪಡೆಯಲಿದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ..ಹಾಗಂತ ಪ್ರಿಯಾಂಕಾ ತಾವು ತಾಯಿಯಾಗುತ್ತಿದ್ದೇನೆ ಎಂದು ನಿಜವಾಗಿಯೂ ಹೇಳಿದ್ದಲ್ಲ, ಬದಲಾಗಿ ಪತಿ ನಿಕ್ ಅವರನ್ನು ರೇಗಿಸಲು ಹೇಳಿದ ಮಾತು.

ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ಆರಂಭವಾಗಿದೆ. ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಕಾಲೆಳೆಯಲು ಶುರುಮಾಡಿದರು. ಅಲ್ಲದೇ ಕೆಲವೇ ಹೊತ್ತಿನಲ್ಲಿ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದ ಏಕೈಕ ದಂಪತಿ ಎಂದರೆ ನಾನು ಮತ್ತು ನಿಕ್. ಆದರೆ ಸದ್ಯದಲ್ಲೇ ನಾವು ಮಕ್ಕಳನ್ನು ಪಡೆಯಲಿದ್ದೇವೆ ಅಂತ ಅನೌನ್ಸ್ ಮಾಡಿ ಪತಿಗೆ ಶಾಕ್ ನೀಡಿದ್ದಾರೆ.

ಶೀಘ್ರವೇ ನಾವು ಮಗು ಪಡೆಯಲಿದ್ದೇವೆ ಎಂಬ ಮಾತುಗಳನ್ನು ಪ್ರಿಯಾಂಕಾ ಬಾಯಲ್ಲಿ ಕೇಳುತ್ತಿದ್ದಂತೆ , ಒಂದು ಕ್ಷಣ ಗಾಬರಿಗೊಂಡ ನಿಕ್ ಇನ್ನೇನು ತನ್ನ ಖುಷಿ ವ್ಯಕ್ತಪಡಿಸಬೇಕು ಅನ್ನೋವಾಗ್ಲೇ, ಜೋರಾಗಿ ನಕ್ಕ ಪ್ರಿಯಾಂಕಾ ತಮಾಷೆಗಾಗಿ ಹೇಳಿದ್ದು ಎಂದು ಶಾಕ್ ನೀಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top