fbpx
ಸಮಾಚಾರ

“ನಿಮ್ಮಿಂದ ಸ್ವಲ್ಪ ದೂರ ಹೋಗ್ತಿದ್ದೇನೆ, ಆದ್ರೆ ಬೇಗ ವಾಪಸ್ಸಾಗ್ತೀನಿ” ಎಂದು ರಶ್ಮಿಕಾ ಮಂದಣ್ಣ ಹೋಗಿದ್ದೆಲ್ಲಿಗೆ

ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ತೆಲುಗು, ತೆಮಿಳು ಚಿತ್ರರಂಗಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇಂಥಾ ರಶ್ಮಿಕಾ ಇದೀಗ ಇದ್ದಕ್ಕಿದ್ದಂತೆ ವಿದೇಶಕ್ಕೆ ಹಾರಿದ್ದಾರೆ,.

ರಶ್ಮಿಕಾ ಅವರು ಬೋರ್ಡಿಂಗ್​ ಪಾಸ್ ಹಾಗೂ ಪಾಸ್​ಪೋರ್ಟ್​ ಫೋಟೋ ಹಾಕಿ ‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ಬರೆದುಕೊಂಡಿದ್ದಾರೆ. ಬೋರ್ಡಿಂಗ್​ ಪಾಸ್​ನಲ್ಲಿ ‘DU’ ಎಂದಷ್ಟೇ ಕಾಣಿಸಿದೆ. ಹೀಗಾಗಿ, ರಶ್ಮಿಕಾ ದುಬೈಗೆ ತೆರಳುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಅವರು ಎಲ್ಲಿಗೆ ತೆರಳುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಬರಬೇಕಿದೆ.

ಅಷ್ಟೇ ಅಲ್ಲದೇ “ಈ ಬಾರಿ ನಿಮ್ಮಿಂದ ದೂರ ಹೋಗುತ್ತಿದ್ದೇನೆ. ಆದರೆ ಬೇಗನೇ ವಾಪಸ್ಸಾಗುತ್ತೇನೆ” ಎಂದು ತಾವು ವಿದೇಶಕ್ಕೆ ಹೋಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರು ಅಮೆರಿಕಗೆ ತೆರಳುತ್ತಿರುವ ಬಗ್ಗೆ ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top