fbpx
ಸಮಾಚಾರ

ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ: ಗರುಡಗಮನ ವೃಷಭವಾಹನ ಚಿತ್ರತಂಡದ ವಿರುದ್ಧ ಹಿಂದೂಗಳ ಆಕ್ರೋಶ

ಕಳೆದ ವಾರವಷ್ಟೇ ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಗರುಡಗಮನ ವೃಷಭವಾಹನ’ ಚಿತ್ರವೂ ಹಿಂದೂಗಳ ಕೆಂಗಣ್ಣಿಗೆ ತುತ್ತಾಗಿದೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿರುವ ಈ ಸಿನಿಮಾದ ಶೈಲಿ, ಕಥಾವಸ್ತು, ಹೊಸತನಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈ ಮಧ್ಯೆ ಸಿನಿಮಾ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ಆರೋಪ ಕೇಳಿಬಂದಿದೆ.

 

 

ಗ್ಯಾಂಗ್‌ಸ್ಟರ್ ಸಿನಿಮಾಗೆ ಪುರಾಣದ ಹೆಸರು ಯಾಕೆ ಇಡಬೇಕಿತ್ತು? ಸಿನಿಮಾದಲ್ಲಿ ಕೊಲೆ ನಡೆಯುವಾಗ ಶ್ಲೋಕಗಳು ಯಾಕೆ ಬೇಕು? ಕೊಲೆ ಮಾಡುವ ವ್ಯಕ್ತಿಗೆ ಮಾದೇವ ಸಾಂಗ್ ಹಿನ್ನೆಲೆ ಸಂಗೀತವಾಗಿ ಬಳಸಿದ್ದೇಕೆ? ಅನ್ನುವುದು ಸಿನಿಮಾದ ವಿರುದ್ಧ ಕೇಳಿ ಬರುತ್ತಿರುವ ಆರೋಪ.

ರೌಡಿಸಂ ಹಿನ್ನಲೆಯ ಚಿತ್ರಕ್ಕೆ ಈ ರೀತಿಯ ಹಿಂದೂ ದೇವರ ಟೈಟಲ್ ಯಾಕೆ ಬೇಕಿತ್ತು? ಎಮ್ಮೆಕೆರೆ ರೌಡಿಯ ಕೊಲೆಯ ವೇಳೆ ಶ್ಲೋಕ ಕೀರ್ತನೆಗಳು ಯಾಕೆ ಎಂದೂ ಪ್ರಶ್ನೆ ಮಾಡಲಾಗಿದೆ. ಹಾಗೆ ಕೊಲೆ ಮಾಡಿ ವಿಕೃತವಾಗಿ ಕುಣಿವ ಕೊಲೆಗಾರನಿಗೆ ಮಾದೇವಾ ಹಾಡು ಯಾಕೆ? ಕೊಲೆಗಡುಕನೊಬ್ಬ ಸ್ವಾಮೀಜಿಯ ಪಾದರಕ್ಷೆ ಧರಿಸುವುದೇಕೆ? ಸೈಕೋಪಾತ್ ಒಬ್ಬನನ್ನು ವೈಭವೀಕರಿಸಲು ಈ ಹಾಡನ್ನು ಬಳಸಿಕೊಂಡಿದ್ದೇಕೆ? ರೌಡಿಗಳಿಗೆ ಹರಿ, ಶಿವ ಎಂದು ಹೆಸರಿಟ್ಟಿರೋದೇಕೆ? ಹೀಗೆ ಮುಂತಾದ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top