fbpx
ಸಮಾಚಾರ

ಸರಿಗಮಪದಿಂದ ಹೊರ ಬಂದರಾ ಮಹಾಗುರುಗಳು? ನಾದಬ್ರಹ್ಮನ ಜಾಗಕ್ಕೆ ಹೊಸ ಜಡ್ಜ್?

ಕನ್ನಡ ಚಿತ್ರರಂಗದ ದೈತ್ಯ ದೇಸಿಪ್ರತಿಭೆ ನಾದಬ್ರಹ್ಮ ಹಂಸಲೇಖ ಅವರು ದಲಿತರ ಮಳೆ ನಡೆಯುತ್ತಿರುವ ಅಸ್ಪೃಶ್ಯತೆ ವಿಚಾರವಾಗಿ ನೀಡಿದ್ದ ಹೇಳಿಕೆ ಸಮಾಜದಲ್ಲಿ ಸಂಚಲವನ್ನೇ ಸೃಷ್ಟಿಸಿದೆ. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು. ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಮಧ್ಯೆ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋ ಬಿಡುತ್ತಿದ್ದಾರಾ? ಎಂಬ ಅನುಮಾನ ಮೂಡಿದೆ. ಏಕೆಂದರೆ ಈ ವಿವಾದ ನಾಂದೇಡ ನಂತರ ಕಳೆದ ವಾರದ ಸಂಚಿಕೆಯಲ್ಲಿ ಹಂಸಲೇಖ ಅವರು ಭಾಗವಹಿಸಿರಲಿಲ್ಲ ಇದು ಸಹಜವಾಗಿ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋನಿಂದ ಹಿಂದೆ ಸರಿದರಾ ಎಂಬ ಶಂಕೆ ಮೂಡುತ್ತಿದೆ.

ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಹೊಸಬರ ಎಂಟ್ರಿಯಾಗುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಕಾರ್ಯಕ್ರಮದಿಂದ ಹಂಸಲೇಖ ಅವರು ಹೊರ ಹೋಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಸ್ವತಃ ಹಂಸಲೇಖ ಅವರಾಗಲಿ ಅಥವಾ ವಾಹಿನಿಯವರಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top