fbpx
ಸಮಾಚಾರ

ವಿಚಾರಣೆ ಬಳಿಕ ಹಂಸಲೇಖ ಪರ ವಕೀಲ ದ್ವಾರಕಾನಾಥ್ ಹೇಳಿದ್ದೇನು ಗೊತ್ತಾ?

ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದೀಗ ಒಂದು ಗಂಟೆಯ ವಿಚಾರಣೆ ಮುಗಿಸಿ ವಾಪಸ್​ ತೆರಳಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ಹಂಸಲೇಖ ಪರ ವಕೀಲ ದ್ವಾರಕಾನಾಥ್, ಇಂದಿನ ವಿಚಾರಣೆ ಮುಗಿದಿದೆ. ಪೊಲೀಸರು ಮುಂದೆ ಯಾವಾಗ ಕರೆಯುತ್ತಾರೋ ಆಗ ಬರಬೇಕಿದೆ. ಮತ್ತೆ ಚಿಚಾರಣೆ ಅವಶ್ಯಕತೆ ಇದ್ದರೆ ಕರೆಸುತ್ತೇವೆ ಎಂದಿದ್ದಾರೆ. ನಾವು ಕಾನೂನು ಮುಖಾಂತರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಇದೆ ವೇಳೆ ಹಂಸಲೇಖ ಅವರಿಗೆ ಮಾಡಿರುವ ಅವಮಾನ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಚೇತನ್ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವನಗುಡಿ ಪೊಲೀಸ್ ರಾಣೆಯ ಮುಂದೆ ಕನ್ನಡ ಪರ ಸಂಘಟನೆಯ ನೂರಾರು ಕಾರ್ಯಕರತರು ಚೇತನ್ ಅವರ ಪ್ರತಿಭಟನಾ ಸಾರಥ್ಯಕ್ಕೆ ಬೆಂಬಲ ಸೂಚಿಸಿ ಹಂಸಲೇಖ ಅವರ ಪರ ಘೋಷಣೆ ಕೂಗುತ್ತಿದ್ದಾರೆ.

ಈಗಾಗಲೇ ಎರಡು ಬಾರಿ ವಿಚಾರಣೆ ತಪ್ಪಿಸಿಕೊಂಡಿದ್ದ ಹಂಸಲೇಖ, ಇಂದು ನಗರದ ಬಸವನಗುಡಿ ಪೊಲೀಸ್​ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಇನ್ನು ಹಂಸಲೇಖ ಪರ ಹಾಗೂ ವಿರೋಧ ಪ್ರತಿಭಟನೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top