fbpx
ಸಮಾಚಾರ

ಹಂಸಲೇಖ ಜೊತೆಗೆ ಸೆಲ್ಫಿ, ಫೋಟೋ ತೆಗೆದುಕೊಂಡ ಪೊಲೀಸರು

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಸಿನಿಮಾ ಸಾಹಿತಿ ಹಂಸಲೇಖ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪೇಜಾವರಶ್ರೀಗಳ ಕುರಿತಾಗಿ ಆಡಿದ ಮಾತುಗಳು ಪರ ವಿರೋಧ ಚರ್ಚೆಗೆ ಕಾರಣ ಆಗಿದ್ದವು. ಬಳಿಕ ಘಟನೆ ಹಂಸಲೇಖ ರನ್ನು ಬೆಂಬಲಿಸಿ ಹಲವು ಪ್ರತಿಭಟನೆ ನಡೆದಿತ್ತು. ಅವರ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ನೆನ್ನೆ ಬೆಂಗಳೂರಿನ ಬಸವನಗುಡಿ ಠಾಣೆಗೆ ಹೋಗಿ ವಿಚಾರಣೆ ಎದುರಿಸಿ ಬಂದಿದ್ದಾರೆ.

ಬಸವನಗುಡಿ ಠಾಣೆಗೆ ಹಾಜರಾದ ಸಂದರ್ಭದಲ್ಲಿ ಹಂಸಲೇಖರವರು ಉತ್ಸಾಹದಿಂದಿದ್ದರು. ಈ ವೇಳೆ ಹಂಸಲೇಖರವರ ಅಪಾರ ಅಭಿಮಾನಿಗಳು ಠಾಣೆ ಎದುರು ಜಮಾಯಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಹಂಸಲೇಖ ಬಹಳ ಖುಷಿ ಮತ್ತು ಉತ್ಸಾಹದಿಂದ ಎಸಿಪಿ, ಡಿಸಿಪಿ, ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳ ಜೊತೆ ಅವರ ಹಳೆಯ ಸಿನಿಮಾಗಳು ಮತ್ತು ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದರು.

ಠಾಣೆಗೆ ಬಂದ ಹಂಸಲೇಖರವರಿಗೆ ಪೊಲೀಸ್ ಸಿಬ್ಬಂದಿಗಳು ಚಹಾ ಮತ್ತು ಬಿಸ್ಕೆಟ್ ಕೊಟ್ಟು ಸತ್ಕರಿಸಿದರು. ಹೇಳಿಕೆ ನೀಡಿ ಮುಗಿಸಿ ಕೊನೆಗೆ ತೆರಳುವ ಸಂದರ್ಭದಲ್ಲಿ ಎಸಿಪಿ, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಹಂಸಲೇಖರವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top