fbpx
ಸಮಾಚಾರ

ಗಣೇಶ್ ನಟನೆಯ ‘ಸಖತ್’ ಸಿನಿಮಾಗೆ ವಿರೋಧ: ಕ್ಷಮೆಯಾಚಿಸಿದ ನಿರ್ದೇಶಕ ಸುನಿ

ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯಲ್ಲಿ ಮತ್ತು ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಖತ್’ ಸಿನಿಮಾ ನೆನ್ನೆಯಷ್ಟೇ ಬಿಡುಗಡೆಗೊಂಡು ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಗುಡ್ ರೆಸ್ಪಾನ್ಸ್ ಪಡೆದುಕೊಂಡಿರುವ ಸಖತ್ ಸಿನಿಮಾದ ವಿರುದ್ಧ ಅಂಧ ಸುಮುದಾಯದಿಂದ ವಿರೋಧ ವ್ಯಕ್ತವಾಗಿದ್ದು ಈ ಬಗ್ಗೆ ನಿರ್ದೇಶಕ ಸುನಿ ಕ್ಷಮೆಯಾಚಿಸಿದ್ದಾರೆ…

ಕಣ್ಣು ಕಾಣದವರಿಗೆ ಕುರುಡರು ಎನ್ನುವ ಶಬ್ದ ಬಳಕೆ ಮಾಡಬಾರದು. ಈ ಕಾರಣಕ್ಕೆ ‘ಸಖತ್’ ಸಿನಿಮಾಗೆ ವಿರೋಧ ವ್ಯಕ್ತಪಡಿಸಿ ಸಿನಿಮಾಗೆ ಸ್ಟೇ ತರಲು ಅಂಧ ಸಮುದಾಯದವರು ನಿರ್ಧರಿಸಿದ್ದರು. ಆದರೆ ಈ ಮದ್ಯೆ ನಿರ್ದೇಶಕ ಸುನಿ ಅಂಧ ಸಮುದಾಯದ ಬಳಿ ಕ್ಷಮೆಯಾಚಿಸಿದ್ದು ತಪ್ಪನ್ನ ಸರಿ ಮಾಡುವ ಬಗ್ಗೆ ಅಂಧ ಸಮುದಾಯಕ್ಕೆ ಭರವಸೆ ನೀಡಿದ್ದಾರೆ. ಇದರ ಜತೆ ಆ ಸಮುದಾಯಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿದ್ದಾರೆ.

ಬಹಿರಂಗ ಪತ್ರ:
“ಸಖತ್ ಸಿನಿಮಾದ ನಿರ್ದೇಶಕ ಸುನೀಲ್ ಕುಮಾರ್ ಆದ ನಾನು ತಿಳಿಯಪಡಿಸುವ ವಿಷಯವೇನೆಂದರೆ, ಸಖತ್ ಸಿನಿಮಾವು ಅಂಧರ ಬಗ್ಗೆಯಾಗಿದ್ದು, ಇದರಲ್ಲಿ ನಿಮಗೆ ನೊಂದ ವಿಷಯವಿದ್ದರೆ, ನಿಮಗೆ ಶುಕ್ರವಾರ, 26-11-2021ರಂದು ಸಿನಿಮಾ ತೋರಿಸಿ ಹಾಗೂ ಅದೇ ದಿನ ಸುದ್ದಿಗೋಷ್ಟಿ ನಡೆಸಿ, ನೀವು ಹೇಳುವ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿರುತ್ತೇನೆ. ಹೀಗಾಗಿ ನೀವು ಚಿತ್ರ ಬಿಡುಗಡೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. ತಿಳಿದೋ.. ತಿಳಿಯದೆಯೋ ತಪ್ಪಾಗಿದ್ದರೆ ನಾನು ಮತ್ತು ನನ್ನ ತಂಡದ ಪರವಾಗಿ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.. ಮನ್ನಿಸಿ.” ಎಂದು ಸುನಿ ನಿನ್ನೆ(ನವೆಂಬರ್ 25) ರಂದು ಬಹಿರಂಗ ಪತ್ರ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top