fbpx
ಸಮಾಚಾರ

ಟೀಂ ಇಂಡಿಯಾ ಕ್ರಿಕೆಟಿಗನಿಗೆ ಕೂಡಿಬಂತು ಕಂಕಣಬಭಾಗ್ಯ: ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಶಾರ್ದುಲ್ ಠಾಕೂರ್

ಟೀಂ ಇಂಡಿಯಾದಲ್ಲಿ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಮ್ಯಾಚ್ ವಿನ್ನರ್ ಎನಿಸಿಕೊಂಡಿರುವ ಶಾರ್ದುಲ್ ಠಾಕೂರ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ಬಹುಕಾಲದ ಗೆಳತಿಯೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ನವೆಂಬರ್ 29 ರಂದು ತನ್ನ ಗೆಳತಿ ಮಿಥಾಲಿ ಪರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರ್ಯಕ್ರಮ ಮುಂಬೈನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ನಡೆದಿದ್ದು ಮುಂದಿನ ವರ್ಷ ಶಾರ್ದೂಲ್ ಠಾಕೂರ್ ಮದುವೆಯಾಗಬಹುದು ಎಂಬ ಸುದ್ದಿ ಇದೆ.

 

 

“ಸೋಮವಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಸೌಲಭ್ಯದಲ್ಲಿ ಒಂದು ಸಣ್ಣ ನಿಶ್ಚಿತಾರ್ಥದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಅವರು 75 ಅತಿಥಿಗಳನ್ನು, ಅದ್ರಲ್ಲೂ ಹೆಚ್ಚಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಂತರ ಮದುವೆ ನಡೆಯುವ ಸಾಧ್ಯತೆಯಿದೆ” ಎಂದು ಶಾರ್ದೂ್ಲ್‌ಗೆ ಹತ್ತಿರವಿರುವ ಮೂಲವೊಂದು ತಿಳಿಸಿದೆ.

 

 

30 ವರ್ಷದ ಶಾರ್ದೂಲ್ ಠಾಕೂರ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ವಿಶ್ರಾಂತಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ ನಾಲ್ಕು ಟೆಸ್ಟ್, 15 ODI ಮತ್ತು 24 T20 ಪಂದ್ಯಗಳನ್ನು ಆಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top