fbpx
ಸಮಾಚಾರ

ಪುನೀತ್ ಅಭಿಮಾನಿಯ ಕುಟುಂಬಕ್ಕೆ ಕಷ್ಟಕ್ಕೆ ಮಿಡಿದ ಕಿಚ್ಚ: ಅಪ್ಪು ಅಭಿಮಾನಿ ಕಷ್ಟ ಪರಿಹರಿಸಿದ ಸುದೀಪ್ ಟ್ರಸ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಉತ್ತಮ ನಟ ಮಾತ್ರವಲ್ಲ ಅಷ್ಟೇ ಒಳ್ಳೆಯ ಮನಸಿನ ಶ್ರೇಷ್ಠವ್ಯಕ್ತಿ ಕೂಡ ಹೌದು, ದಾನ ಧರ್ಮ ಮಾಡುವುದರಲ್ಲಿ ಸುದೀಪ್ ಎತ್ತಿದ ಕೈ ಚಿತ್ರರಂಗದ ಒಳಗೂ ಹೊರಗೂ ಕಷ್ಟದಲ್ಲಿ ಇರುವವರಿಗೆ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿರುವ ಸುದೀಪ್ ಏನೇ ಸಹಾಯ ಮಾಡಿದರೂ ಎಲ್ಲಿಯೂ ಹೇಳಿಕೊಳ್ಳಿವುದಿಲ್ಲ, ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅಂತ ಹೇಳ್ತಾರಲ್ಲ ಹಾಗೆ., ಸುದೀಪ್​ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ಸಾಕಷ್ಟು ಜನರ ಕಷ್ಟಕ್ಕೆ ನೆರವಾಗಿದ್ದಾರೆ. ಇಂಥಾ ಸುದೀಪ್ ಇದೀಗ ಪ್ರಾಣಾಪಾಯದಲ್ಲಿದ್ದ ಅಪ್ಪು ಅಭಿಮಾನಿಯೇ ಕುಟುಂಬಕ್ಕೆ ನೆರವಾಗಿದ್ದಾರೆ.

ಹೌದು! ಬೆನಕ ಅಪ್ಪು ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಗೆ ಸುದೀಪ್ ಸಹಾಯ ಮಾಡಿದ್ದು, ಈ ಮೂಲಕ ಸ್ನೇಹಿತನ ಅಭಿಮಾನಿ ಕಷ್ಟವನ್ನು ಕಿಚ್ಚ ಸುದೀಪ್ ಪರಿಹರಿಸಿದ್ದಾರೆ. ಈ ಬಗ್ಗೆ ಬೆನಕ ಅಪ್ಪು ಅವರೇ ಫೇಸ್ಬುಕ್ ಮೂಲಕ ಮಾಹಿತಿ ನೀಡಿದ್ದು ಸಹಾಯ ಮಾಡಿದ ಕಿಚ್ಚ ಮತ್ತು ಟ್ರಸ್ಟ್ ಗೆ ಥ್ಯಾಂಕ್ಸ್ ಹೇಳಿದ್ದಾರೆ.

 

 

ನಮಸ್ತೆ ಸ್ನೇಹಿತರೆ,
ಕಳೆದ ಶುಕ್ರವಾರ ನನ್ನ ತಾಯಿ ಹಾಗೂ ನನ್ನ ತಮ್ಮನಿಗೆ ನೆಲಮಂಗಲದ ಬಳಿ ರಸ್ತೆ ಅಪಘಾತದಲ್ಲಿ ತುಂಬಾ ಗಾಯಗೊಂಡು ಶ್ರೇಯಸ್ ಆಸ್ಪತ್ರೆಗೆ ದಾಖಲಾಗಿದರು, ನನ್ನ ತಾಯಿಗೆ ಈ ಅಪಘಾತದಲ್ಲಿ ತಲೆಗೆ ತುಂಬಾ ಪೆಟ್ಟು ಬಿದ್ದಿದ್ದ ಕಾರಣ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದರು, ಅದಕ್ಕೆ ತುಂಬಾ ಹಣ ಬೇಕಾಗಿರುತ್ತದೆ,

ನಾನು ಅಪ್ಪು ಅವರ ದೊಡ್ಡ ಅಭಿಮಾನಿ ಅಪ್ಪು ಅವರು ನನ್ನ ಕುಟುಂಬಕ್ಕೆ ತುಂಬಾ ಸಹಾಯ ಮಾಡುತಿದ್ದರು, ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ನನಗೆ ತಾಯಿಯನ್ನು ಉಳಿಸಿಕೊಳ್ಳುವುದು ಕಠಿಣಕರವಾಗಿತ್ತು, ಈ ಸಂದರ್ಭದಲ್ಲಿ ನನ್ನ ಸ್ನೇಹಿತ ಅಪ್ಪು ಅವರ ಆತ್ಮೀಯ ಗೆಳೆಯರಾದ ಸುದೀಪ್ ಸರ್ ಬಳಿ ಸಹಾಯ ಕೇಳು ಎಂದು ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ. ಕೂಡಲೇ ನಾನು ರಮೇಶ್ ಕಿಟ್ಟಿ ಸರ್ ಅವರನ್ನು ಸಂಪರ್ಕಿಸಿದೆ, ಅವರು ನನ್ನ ತಾಯಿ ಹಾಗು ತಮ್ಮನ ಆರೋಗ್ಯದ ಮಾಹಿತಿ ಪಡೆದು ಕೂಡಲೇ ಸ್ಪಂದಿಸಿ ಆಸ್ಪತ್ರೆಯ ಬಳಿ ಬಂದು ನನ್ನ ತಾಯಿ ಹಾಗೂ ತಮ್ಮನನ್ನು ಮಾತಾಡಿಸಿ ನನಗೆ ಧೈರ್ಯವನ್ನು ತುಂಬಿ, ತಾಯಿಯ ಅರೋಗ್ಯದ ಸ್ಥಿತಿ ತಿಳಿದುಕೊಂಡು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತವುದಾಗಿ ತಿಳಿಸಿದ್ದಾರೆ..

ಸುದೀಪ್ ಸರ್ ಹಾಗೂ ಅವರ ಚಾರಿಟೇಬಲ್ ಸೊಸೈಟಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top