fbpx
ಸಮಾಚಾರ

ಮೀಟೂ ಕೇಸ್ ನಲ್ಲಿ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್, ಶ್ರುತಿ ಹರಿಹರನ್ ಗೆ ಹಿನ್ನಡೆ: ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಈ ಹಿಂದೆ ದೌರ್ಜನ್ಯ ಆರೋಪ ಮಾಡಿದ್ದರು. ಈ ಸಂಬಂಧ 2018ರಲ್ಲಿ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಸ್​ ದಾಖಲಾಗಿ ಮೂರು ವರ್ಷ ಕಳೆದರೂ ನಟ ಅರ್ಜುನ್​ ಸರ್ಜಾ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಆ ಕಾರಣದಿಂದ ಕಬ್ಬನ್​ ಪಾರ್ಕ್​ ಪೊಲೀಸರು ಬಿ ರಿಪೋರ್ಟ್ ಸಿದ್ಧಪಡಿಸಲು ನಿರ್ಧರಿಸಿದ್ದಾರೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಶ್ರುತಿ ಹರಿಹರನ್‌ಗೆ ನೋಟಿಸ್ ನೀಡುವ ಮೂಲಕ ವಿಚಾರಣೆಯಲ್ಲಿ ಭಾಗಿಯಾಗುವಂತೆ ತಿಳಿಸಿದ್ದರು. ನೋಟಿಸ್ ನೀಡಿ ಮೂರು ದಿನಗಳಲ್ಲಿ ವಿಚಾರಣೆಗೆ ಬಾರದಿದ್ದರೆ, ಯಾವುದೇ ಸಾಕ್ಷಿ ಇಲ್ಲವೆಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸುವುದಾಗಿಯೂ ಹೇಳಿದ್ದರು. ಮೂರು ದಿನ ಕಳಿದರೂ ಶ್ರುತಿ ವಿಚಾರಣೆಯಲ್ಲಿ ಭಾಗಿಯಾಗಿರಲಿಲ್ಲ ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಬಿ-ರಿಪೋರ್ಸ್ ಸಲ್ಲಿಸಿದ್ದಾರೆ. ಈ ಮೂಲಕ ಅರ್ಜುನ್ ಯಾವುದೇ ತಪ್ಪು ಮಾಡಿಲ್ಲ, ಶ್ರುತಿ ಬಳಿ ಸಾಕ್ಷಿ ಇಲ್ಲ ಎಂಬುದು ಸಾಬೀತಾಗಿದೆ. ಬಿ-ರಿಪೋರ್ಟ್‌ ಸಲ್ಲಿಸುವುದೆಂದರೆ ಆರೋಪಿ ಯಾವುದೇ ತಪ್ಪು ಮಾಡಿಲ್ಲ ಎಂದರ್ಥ.

 

 

ಮೇಘನಾರಾಜ್ ಹೇಳಿದ್ದೇನು?
ಈ ಪ್ರಕರಣ ಸುದ್ದಿಯಾಗ್ತಿದಂತೆ ಸೋಷಿಯಲ್‌ವ ಮೀಡಿಯಾದಲ್ಲಿ ಪರೋಕ್ಷವಾಗಿ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಸರ್ಜಾ ಯಾವಾಗಲೂ ಜಂಟಲ್ ಮ್ಯಾನ್ ಅಂತ ಮೇಘನಾ ರಾಜ್ ಪೋಸ್ಟ್ ಹಾಕಿದ್ದಾರೆ.

‘ಧರ್ಮೋ ರಕ್ಷತಿ ರಕ್ಷಿತಃ’ ಎಂದ ಧ್ರುವ!
ಈ ವಿಚಾರ ತಿಳಿಯುತ್ತಿದ್ದಂತೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಧ್ರುವ ಸರ್ಜಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋವೊಂದನ್ನು ಧ್ರುವ ಸರ್ಜಾ ಶೇರ್​ ಮಾಡಿದ್ದಾರೆ. ಸೊಳ್ಳೆ ಬ್ಯಾಟ್​ನಿಂದ ಕೀಟಗಳನ್ನು ಸಾಯಿಸುತ್ತಿರುವ ದೃಶ್ಯ ಅದರಲ್ಲಿದ್ದು, ‘ಸೊಳ್ಳೆ ಕ್ರಿಮಿ ಕೀಟ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top