fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ಇಂಪ್ಯಾಕ್ಟ್: ಗುರು ರಾಘವೇಂದ್ರ ಬ್ಯಾಂಕ್‌ ಗ್ರಾಹಕರಿಗೆ ಹಣ ಮರುಪಾವತಿ ಆರಂಭ

ಬೆಂಗಳೂರಿನ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಬ್ಯಾಂಕ್ ನ ಅವ್ಯವಹಾರ ಹಗರಣದ ಬಗ್ಗೆ ರಾಜ್ಯಸಭೆಯಲ್ಲಿ ಜನ ಸಾಮಾನ್ಯರ ಪರವಾಗಿ ಜಿಸಿ ಚಂದ್ರಶೇಖರ್ ಗುಡುಗಿದ ಪರಿಣಾಮ ಇಂದು ನೊಂದ ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೌದು, ಶ್ರೀ ಗುರುರಾಘವೇಂದ್ರ ಬ್ಯಾಂಕ್‌ನ ಠೇವಣಿದಾರರಿಗೆ 5 ಲಕ್ಷ ರೂ. ವರೆಗಿನ ಠೇವಣಿ ವಿಮೆ ಮೊತ್ತವನ್ನು ಇಂದಿನಿಂದ ಮರುಪಾವತಿ ಮಾಡಲಾಗುತ್ತಿದೆ.

ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿನ ಹಲವು ಅಕ್ರಮಗಳನ್ನು ಗಮನಿಸಿ ಆರ್‌ ಬಿ ಐ, ಜನವರಿ 10 2020 ರಂದು ನಿಬಂಧನೆಗಳಿಗೆ ಒಳಪಡಿಸಿ ನಿರ್ಬಂಧಗಳನ್ನು ಹೇರಿತ್ತು. ಈ ಬ್ಯಾಂಕ್‌ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390 ರಷ್ಟು ಜನರು 5 ಲಕ್ಷ ರೂ. ವರೆಗೆ ಠೇವಣಿ ಮಾಡಿದ್ದರು. ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿರುವ ಗ್ರಾಹಕರ ನಗದು ವಿತ್ ಡ್ರಾ ಮಾಡಲು ನಿರ್ಬಂಧ ಹೇರಿತ್ತು. ಇದರಿಂದ ಸಾವಿರಾರು ಠೇವಣಿದಾರರು ಆತಂಕಗೊಂಡಿದ್ದರು.

 

 

 

 

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣದ ಬಗ್ಗೆ ಕಳೆದ ಎರಡು ವರ್ಷದಿಂದ ಸುದ್ದಿಯಾಗುತ್ತಲೇ ಇದ್ದು ಬ್ಯಾಂಕ್ ನ ಠೇವಣಿದಾರರು ಪ್ರತಿಭಟಿಸುತ್ತಲೇ ಇದ್ದರು., ಹೀಗಿದ್ದರೂ ಈ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದನಾಗಲಿ, ಶಾಸಕರಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ.. ನಮ್ಮ ಸಮಸ್ಯೆಯಲ್ಲಿ ಆಲಿಸಿ ತಮಗೆ ನ್ಯಾಯ ಕೊಡಿಸಲು ಆಗದ ಸಂಸದ ಜನ ಪ್ರತಿನಿಧಿಗಳ ವಿರುದ್ಧ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಚುನಾಯಿತ ನಾಯಕರ ಕೈಯಿಂದ ಆಗದ ಕೆಲಸವನ್ನು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಾಡಿ ತೋರಿಸಿದ್ದರು. ಬಹುಕೋಟಿ ಹಗರಣದ ಬಗ್ಗೆ ಠೇವಣಿದಾರರ ಪರವಾಗಿ ಸಂಸತ್ ನಲ್ಲಿ ಚರ್ಚೆ ನಡೆಸಿ ಆರ್ಥಿಕ ಸಚಿವರ ಗಮನಕ್ಕೆ ತಂದಿದ್ದರು.. ವಿತ್ತ ಸಚಿವೇ ನಿರ್ಮಲ ಸೀತಾರಾಮನ್ ಬಳಿ ಮನವಿ ಮಾಡಿ ಠೇವಣಿದಾರರ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ ನಿರ್ಮಲ ಸೀತಾರಾಮನ್ ಅವರು ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಪ್ರಕರಣದ ಸಂಭಂದ ಬೇಗ ಬಗೆಹರಿಸುವಂತೆ ಲಿಖಿತ ರೂಪದಲ್ಲಿ ಪತ್ರದ ಮುಖೇನ ಆಗ್ರಹಿಸಿದ್ದರು.

 

 

ಅಂದು ನೊಂದ ಜನರಿಗೆ ನ್ಯಾಯ ಕೊಡಿಸಬೇಕೆಂದು ಸಂಸದ ಜಿಸಿ ಚಂದ್ರಶೇಖರ್ ಅವ್ರ ಸತತದ ಪ್ರಯತ್ನದ ಪರಿಣಾಮ ಇಂದು ಗುರು ರಾಘವೇಂದ್ರ ಬ್ಯಾಂಕ್ ನ ಗ್ರಾಹಕರಿಗೆ ತಮ್ಮ ಹಣ ತಮಗೆ ಸಿಗುತ್ತಿದೆ. ಸೋಮವಾರ ಒಂದೇ ದಿನ ಒಟ್ಟು ರು. 401 ಕೋಟಿಯನ್ನು ಠೇವಣಿದಾರಿಗೆ ನೀಡಲಾಗಿದೆ. ಸದ್ಯಕ್ಕೆ 5 ಲಕ್ಷದವರೆಗಿನ ಹಣ ಮಾತ್ರ ಸಿಗುತ್ತಿದೆ ಮುಂದಿನ ದಿನಗಳಲ್ಲಿ ತಮ್ಮ ಸಂಪೂರ್ಣ ಹಣವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಈ ಬಗ್ಗೆ ಸ್ವತಃ ಜಿಸಿ ಚಂದ್ರಶೇಖರ್ ಅವರೇ ಮಾಹಿತಿ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದು ಠೇವಣಿ ಹಣದ ಮರುಪಾವತಿಯ ಬಗ್ಗೆ ತಿಳಿಸಿದ್ದಾರೆ. “ಬೆಂಗಳೂರು ದಕ್ಷಿಣದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಠೇವಣಿ ಇಟ್ಟಿದ್ದ ಠೇವಣಿದಾರರು ಬಹುತೇಕರು ಕನ್ನಡಿಗರು ಮತ್ತು ನಿವೃತ್ತ ನೌಕರರು, ಸಂಸತ್ ನಲ್ಲಿ ನಾನು ಅವರ ಧ್ವನಿಯಾಗಿ ಮಾಡಿದ ಮನವಿಯ ಫಲ ಇದು. ₹5ಲಕ್ಷ ರೂ ವರೆಗೆ ಠೇವಣಿ ಹಣ ವಾಪಸ್ ಮಾಡಲಾಗುವುದು! ಪೂರ್ತಿ ಹಣ ಸಿಗುವವರೆಗೂ ನಾನು ಗ್ರಾಹಕರೊಂದಿಗೆ ನಿಲ್ಲುತ್ತೇನೆ” ಎಂದು ಜಿಸಿ ಚಂದ್ರಶೇಖರ್ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆ ತಾವು ಸಂಸತ್ ನಲ್ಲಿ ರಾಘವೇಂದ್ರ ಬ್ಯಾಂಕ್ ಹಗರಣದ ಬಗ್ಗೆ ಮಾತನಾಡಿದ್ದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

 

 

ಹಣ ಪಡೆಯುವುದು ಹೇಗೆ?
ಗ್ರಾಹಕರು ಬ್ಯಾಂಕ್‌ ಶಾಖೆಗೆ ತೆರಳಿ ಹಣ ಮರಳಿ ಪಡೆಯಲು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ತಮ್ಮ ಗುರುತಿನ ಅಧಿಕೃತ ದಾಖಲೆಗಳನ್ನು ನೀಡಬೇಕು. ತಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಮರಳಿ ಪಡೆಯಲು ಸಮ್ಮತಿ ಸೂಚಿಸಿ, ಹಣವನ್ನು ಪಡೆಯುವ ಸಲುವಾಗಿ ಬೇರೊಂದು ಬ್ಯಾಂಕ್‌ನ ಖಾತೆ ಸಂಖ್ಯೆ ನೀಡಬೇಕು. ಹೀಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ ಗ್ರಾಹಕರು ಸೂಚಿಸಿ ಬೇರೆ ಬ್ಯಾಂಕ್‌ನ ಖಾತೆಗೆ ಹಣ ಜಮೆ ಮಾಡಲಾಗುವುದು.

ಒಟ್ಟಿನಲ್ಲಿ ಜನಸಾಮಾನ್ಯರ ಗಂಭೀರ ಸಮಸ್ಯೆಯ ಬಗ್ಗೆ ಕಾಳಜಿವಹಿಸಿ ಪಾರ್ಲಿಮೆಂಟ್ ನಲ್ಲಿ ಧ್ವನಿಯೆತ್ತಿ, ಅರ್ಥ ಸಚಿವೆಗೆ ಪತ್ರ ಬರೆದು ಕನ್ನಡಿಗರಿಗೆ ನ್ಯಾಯ ಕೊಡಿಸುವಲ್ಲಿ ಬಹಳ ಶ್ರಮಿಸಿದ ಹೆಮ್ಮೆಯ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನೂ ಕೃತಜ್ಞತೆ ಸಲ್ಲಿಸಲೇಬೇಕು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top